ಕೊಡಗು: ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳಿದ ನಟಿ ಪ್ರಿಯಾಂಕ ಉಪೇಂದ್ರ
ಮಡಿಕೇರಿ, ಆ.24: ಖ್ಯಾತ ನಿರ್ದೇಶಕ ಹಾಗೂ ನಟ ಉಪೇಂದ್ರ ಅವರ ಪತ್ನಿ, ನಟಿ ಪಿಯಾಂಕ ಉಪೇಂದ್ರ ಅವರು ಸುಂಟಿಕೊಪ್ಪ ಭಾಗದ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದರು.
ಮಹಾಮಳೆಯಿಂದ ಆಶ್ರಯ ಕಳೆದುಕೊಂಡು ಅತಂತ್ರ ಪರಿಸ್ಥಿತಿಯಲ್ಲಿ ಪರಿಹಾರ ಕೇಂದ್ರಗಳಲ್ಲಿ ನೆಲೆಸಿರುವ ಅಸಹಾಯಕರಿಗೆ ಅಭಯ ನೀಡಿದ ಪ್ರಿಯಾಂಕ ನೊಂದವರಿಗೆ ಸಾಂತ್ವನ ಹೇಳಿದರು. ಉಪಹಾರ ವಿತರಿಸಿ ಆತ್ಮಸ್ಥೈರ್ಯ ತುಂಬಿದರು. ಹೊದಿಕೆ, ಔಷಧಿ ಮತ್ತು ಮಕ್ಕಳಿಗೆ ಬಟ್ಟೆಗಳನ್ನು ಹಂಚಿದ ಪ್ರಿಯಾಂಕ ಹೊಸ ಬದುಕು ಕಂಡುಕೊಳ್ಳಲು ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಪ್ರಜಾಕೀಯ ಪಕ್ಷದ ಕೊಡಗು ಜಿಲ್ಲಾ ಪ್ರಮುಖ ಬಡ್ಡನ ಚಿರಾಗ್ ಸೋಮಣ್ಣ ಈ ಸಂದರ್ಭ ಹಾಜರಿದ್ದರು.
Next Story