ಹಸೆಮಣೆಯೇರಿದ ನಿರಾಶ್ರಿತ ಶಿಬಿರದಲ್ಲಿದ್ದ ಯುವತಿ
ಜಲ ಪ್ರಳಯದಿಂದ ತತ್ತರಿಸಿದ್ದ ಮಡಿಕೇರಿಯಲ್ಲಿ ಮೊಳಗಿದ ಮಂಗಳವಾದ್ಯ
ಮಡಿಕೇರಿ, ಆ.26: ಭಾರೀ ಮಳೆ ಹಾಗೂ ಜಲ ಪ್ರಳಯದಿಂದ ತತ್ತರಿಸಿದ್ದ ಮಡಿಕೇರಿಯಲ್ಲಿ ರವಿವಾರ ಮಂಗಳವಾದ್ಯ ಮೊಳಗಿದೆ. ಭಾರೀ ಮಳೆಗೆ ಭೂಕುಸಿತದಿಂದಾಗಿ ಮನೆಯನ್ನು ಕಳೆದುಕೊಂಡಿದ್ದ ಮಕ್ಕಂದೂರಿನ ಮಂಜುಳಾ ಮತ್ತು ಕಣ್ಣೂರಿನ ಕೂತುಪರಂಬುವಿನ ರಜೀಶ್ ವಿವಾಹ ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ.
ಮಂಜುಳಾ ಮತ್ತು ರಜೀಶ್ ವಿವಾಹದ ನಿಶ್ಚಿತಾರ್ಥ ಈ ಹಿಂದೆ ನಡೆದಿತ್ತು. ಮದುವೆಗೆ 10 ದಿನ ಬಾಕಿ ಇದ್ದಾಗ ಮಂಜುಳಾ ಅವರ ಮನೆಗೆ ಗುಡ್ಡ ಕುಸಿದು ಬಿದ್ದ ಪರಿಣಾಮವಾಗಿ ಮಂಜುಳಾ ಕುಟುಂಬ ನೆಲೆ ಕಳೆದುಕೊಂಡು, ಕಾಳಜಿ ಕೇಂದ್ರ ಸೇರಿದ್ದರು. ಈ ಕಾರಣದಿಂದಾಗಿ ಇವರ ಮದುವೆ ರದ್ದಾಗುವ ಹಂತಕ್ಕೆ ತಲುಪಿತ್ತು.
ಈ ನಡುವೆ ಮಾತುಕತೆ ನಡೆದು ರವಿವಾರ ಮಂಜುಳಾ ಮತ್ತು ರಜೀಶ್ ಮದುವೆ ನೆರವೇರಿದೆ. ಮಂಜುಳಾ-ರಜೀಶ್ ಸಂಬಂಧಿಕರು ,ಸ್ನೇಹಿತರು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
Next Story