ಹನೂರು : ರಸ್ತೆ ಕಾಮಗಾರಿಗೆ ಶಿಲಾನ್ಯಾಸ
ಹನೂರು,ಸೆ.29:ಯಾವುದೇ ಒಂದು ಗ್ರಾಮದ ಅಭಿವೃದ್ದಿಗೆ ಆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಪ್ರಮುಖ ಪಾತ್ರವಹಿಸುತ್ತದೆ ಇದ್ದನ್ನು ಮನಗಂಡು ಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಶಾಸಕ ಆರ್ ನರೇಂದ್ರರಾಜು ಗೌಡ ತಿಳಿಸಿದರು.
ತಾಲೂಕಿನ ಗಡಿಹಂಚಿನಲ್ಲಿರುವ ಬೈಲೂರು ಗ್ರಾಮದ ಮುಖ್ಯ ರಸ್ತೆಯಿಂದ ಹಟ್ಟಿಗೌಡನ ಪಾಳ್ಯದವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಎಸ್ಡಿಪಿ ಯೋಜನೆಯಲ್ಲಿ ರಸ್ತೆ ಅಭಿವೃದ್ದಿಗೆ ಸುಮಾರು 1.12ಲಕ್ಷವೆಚ್ಚದಲ್ಲಿ ಶಿಲಾನ್ಯಾಸ ನೇರವೇರಿಸಿದರು ನಂತರ ಮಾತನಾಡಿದ ಅವರು ಗ್ರಾಮಗಳು ಅಭಿವೃದ್ದಿಗೆ ಆಯಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಮುನ್ನಡಿಯನ್ನು ಬರೆಯುತ್ತದೆ ಇದನ್ನು ಮನಗಂಡ ಸರ್ಕಾರ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ದಿಗೆ ಹೆಚ್ಚು ಮನ್ನಣೆ ನೀಡಿ ಸಾಕಷ್ಟು ಯೋಜನೆಗಳ ಮುಖಾಂತರ ಅನುದಾನ ನೀಡಿದೆ.
ಬೈಲೂರು ಭಾಗದ ಬಹುದಿನದ ದಿನದ ಬೇಡಿಕೆ ಆದ ಈ ರಸ್ತೆ ಅಭಿವೃದ್ದಿಯನ್ನು ಇಂದು 1.12ಲಕ್ಷ ವೆಚ್ಚದಲ್ಲಿ ಬೈಲೂರು ಹಟ್ಟಿಗೌಡಪಾಳ್ಯ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಲಾಗಿದೆ. ಈ ರಸ್ತೆಯನ್ನು ಶೀಘ್ರ ಹಾಗೂ ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಪಂ ಸ್ಥಾಯಿ ಸಮಿತಿ ಅದ್ಯಕ್ಷ ಮರಗದಮಣಿ ,ತಾಪಂ ಸದಸ್ಯೆ ಶಿವಮ್ಮ , ಗ್ರಾಪಂ ಉಪಾದ್ಯಕ್ಷೆ ಪ್ರೇಮಾ ಸದಸ್ಯರು ನಾಗೇಂದ್ರ, ನಾಗ, ಗ್ರಾಪಂ ಕಾರ್ಯದರ್ಶಿ ರಾಜಣ್ಣ ಮುಖಂಡ ರವಿ ಷಣ್ಮಗಮ್ ಉದಯ್ ಸೇರಿದಂತೆ ಇನ್ನಿತರರು ಹಾಜರಿದ್ದರು.