ಕಾಶ್ಮೀರ: ಓರ್ವ ಸೈನಿಕ ಹುತಾತ್ಮ, ನಾಲ್ಕು ಉಗ್ರರು ಹತ
ಶ್ರೀನಗರ, ನ.20: ಜಮ್ಮು-ಕಾಶ್ಮೀರದ ಶೋಪಿಯಾನ್ ನಗರದ ಹಳ್ಳಿಯೊಂದರಲ್ಲಿ ಬೆಳಗ್ಗಿನ ಜಾವ ನಡೆದ ಎನ್ಕೌಂಟರ್ನಲ್ಲಿ ಓರ್ವ ಯೋಧ ಹುತಾತ್ಮನಾದರೆ, ನಾಲ್ವರು ಉಗ್ರರು ಹತರಾಗಿದ್ದಾರೆ. ಇನ್ನೂ ಮೂವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೇನಾ ಪ್ಯಾರಾಟ್ರೂಪರ್ಸ್, ರಾಜ್ಯ ಪೊಲೀಸ್ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯ ಜಂಟಿ ತಂಡ ಶ್ರೀನಗರದಿಂದ 60 ಕಿ.ಮೀ. ದೂರದ ನಡಿಗಾಮ್ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಆಗ ಉಗ್ರರು ಗುಂಡಿನ ದಾಳಿ ನಡೆಸಿದ್ದರು.
‘‘ಶೋಪಿಯಾನ್ನ ನಡಿಗಾಮ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರಗಾಮಿಗಳು ಹತರಾಗಿದ್ದಾರೆ’’ ಎಂದು ಶ್ರೀನಗರ ಮೂಲದ ರಕ್ಷಣಾ ವಕ್ತಾರ ರಾಜೇಶ್ ಕಾಲಿಯಾ ಹೇಳಿದ್ದಾರೆ.
Next Story