ಚಿನ್ನದ ಸರ ಎಳೆದು ಪರಾರಿ; ದೂರು
ಮಂಗಳೂರು, ನ.23: ಕದ್ರಿ ಶಿವಬಾಗ್ನಲ್ಲಿ ಗುರುವಾರ ಸಂಜೆ ಬೈಕ್ನಲ್ಲಿ ಬಂದ ಇಬ್ಬರು ಹೆಲ್ಮೆಟ್ಧಾರಿ ಅಪರಿಚಿತರು ಮಹಿಳೆಯೊಬ್ಬರ ಕುತ್ತಿಗೆಯಿಂದ 20 ಗ್ರಾಂ ತೂಕದ ಚಿನ್ನದ ರೋಪ್ ಚೈನ್ ಎಳೆದು ಪರಾರಿಯಾಗಿದ್ದಾರೆ.
ಶಿವಬಾಗ್ ನಿವಾಸಿ ಮರಿಯ ಪಿಂಟೊ ಅವರು ಸಂಜೆ 5 ಗಂಟೆ ವೇಳೆಗೆ ಕದ್ರಿ ಇಎಸ್ಐ ಆಸ್ಪತ್ರೆಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಮರಿಯ ಪಿಂಟೊ ಅವರು ಬೆಂದೂರು ಚರ್ಚ್ನಿಂದ ವಾಪಸ್ ಮನೆಗೆ ಹೊಗುತ್ತಿದ್ದಾಗ ಬೈಕ್ನಲ್ಲಿ ಹೆಲ್ಮೆಟ್ ಧರಿಸಿದ ಇಬ್ಬರು ಅಪರಿಚಿತರು ಬಂದಿದ್ದು, ಅವರು ಮರಿಯ ಅವರ ಕುತ್ತಿಗೆಯಿಂದ ಸರ ಎಳೆದು ಪರಾರಿಯಾದರು. ಈ ಕುರಿತು ನಗರ ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story