ಕೇಜ್ರಿವಾಲ್ ರನ್ನು ಭೇಟಿಯಾಗಲು ತೆರಳಿದ್ದ ವ್ಯಕ್ತಿಯ ಬಳಿ 5 ಸಜೀವ ಗುಂಡುಗಳು ಪತ್ತೆ
ಹೊಸದಿಲ್ಲಿ, ನ.27: ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ರನ್ನು ಭೇಟಿಯಾಗಲು ತೆರಳಿದ್ದ ವ್ಯಕ್ತಿಯೊಬ್ಬರ ಬಳಿ 5 ಸಜೀವ ಗುಂಡುಗಳು ಪತ್ತೆಯಾಗಿದ್ದು, ತಕ್ಷಣ ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಮೆಣಸಿನ ಹುಡಿ ಎರಚಿದ ಘಟನೆ ನಂತರ ನಡೆಯುತ್ತಿರುವ 2ನೆ ಘಟನೆ ಇದಾಗಿದೆ.
ಅರವಿಂದ್ ಕೇಜ್ರಿವಾಲ್ ರನ್ನು ಭೇಟಿಯಾಗಲು ತೆರಳಿದ್ದ ಮುಸ್ಲಿಂ ಧಾರ್ಮಿಕ ಮುಖಂಡರ ಗುಂಪಿನಲ್ಲಿ ಬಂಧಿತ ವ್ಯಕ್ತಿಯೂ ಸೇರಿಕೊಂಡಿದ್ದ ಎನ್ನಲಾಗಿದೆ. ತಪಾಸಣೆ ನಡೆಸುತ್ತಿದ್ದ ವೇಳೆ ಆತನ ಪರ್ಸ್ ನಲ್ಲಿ ಬುಲೆಟ್ ಪತ್ತೆಯಾಗಿತ್ತು. ಕೂಡಲೇ ಆತನನ್ನು ಬಂಧಿಸಲಾಗಿದೆ.
ಮಸೀದಿಯ ಕಾಣಿಕೆ ಡಬ್ಬದಲ್ಲಿ ಬುಲೆಟ್ ಗಳು ಪತ್ತೆಯಾಗಿತ್ತು. ಅದನ್ನು ಪರ್ಸ್ ನಲ್ಲೇ ಇಟ್ಟು ಮರೆತುಹೋಗಿದ್ದೆ. ತಾನು ಅದನ್ನು ಯಮುನಾ ನದಿಗೆ ಎಸೆಯಬೇಕೆಂದು ನಿರ್ಧರಿಸಿದ್ದೆ ಎಂದು ಬಂಧಿತ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.
Next Story