ನೋಟು ನಿಷೇಧ, ಆರ್ಥಿಕತೆ ಕುರಿತು ಸಂಸದೀಯ ಸಮಿತಿಗೆ ವಿವರಿಸಿದ ಊರ್ಜಿತ್ ಪಟೇಲ್
ಹೊಸದಿಲ್ಲಿ,ನ.27: ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ನೋಟು ನಿಷೇಧ,ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಎನ್ಪಿಎ ಸ್ಥಿತಿ ಮತ್ತು ಇತರ ವಿಷಯಗಳ ಕುರಿತು ವಿವರಣೆ ನೀಡಲು ಮಂಗಳವಾರ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಹಾಜರಾಗಿದ್ದರು.
ಈ ಹಿಂದೆ ನಿಗದಿಯಾಗಿದ್ದಂತೆ ಪಟೇಲ್ ನ.12ರಂದೇ ಸಮಿತಿಯ ಮುಂದೆ ಹಾಜರಾಗಬೇಕಿತ್ತು. ನೋಟು ನಿಷೇಧ,ಆರ್ಬಿಐನಲ್ಲಿ ಸುಧಾರಣೆಗಳು,ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಅನುತ್ಪಾದಕ ಆಸ್ತಿಗಳು,ಆರ್ಥಿಕತೆಯ ಸ್ಥಿತಿಗಳಿಗೆ ಸಂಬಂಧಿಸಿದ ವಿಷಯಗಳನ್ನು ಸಮಿತಿಯ ಅಜೆಂಡಾದಲ್ಲಿ ಪಟ್ಟಿ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿದವು.
ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಅವರ ನೇತೃತ್ವದ 31 ಸದಸ್ಯರ ಸಮಿತಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಇದ್ದಾರೆ.
Next Story