ಪುಲ್ಕೇರಿ: ಡಿಸೆಂಬರ್ 1ರಂದು ‘ಜಶ್ನೇ ಈದ್ ಮೀಲಾದುನ್ನಬಿ’ ಕಾರ್ಯಕ್ರಮ
ಕಾರ್ಕಳ, ನ.28: ಪುಲ್ಕೇರಿ ಜಲ್ವಾ ಇ ನೂರ್ ಮದ್ರಸ ವತಿಯಿಂದ ಪ್ರವಾದಿ ಮುಹಮ್ಮದ್(ಸ.) ಅವರ ಜನ್ಮ ದಿನಾಚರಣೆಯ ಅಂಗವಾಗಿ ಡಿಸೆಂಬರ್ 1ರಂದು ಪುಲ್ಕೇರಿಯ ಸಮೀರ್ ಮಂಝಿಲ್ ವಠಾರದಲ್ಲಿ ‘ಜಶ್ನೇ ಈದ್ ಮೀಲಾದುನ್ನಬಿ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಸಂಜೆ 5ರಿಂದ ರಾತ್ರಿ 10:30ರವರೆಗೆ ಸುನ್ನಿ ವಿದ್ವಾಂಸ, ಹಝ್ರತ್ ವೌಲನಾ ಮುಫ್ತಿ ಮನ್ನಾನ್ ರಝಾ ಖಾನ್, ಬರೇಲಿ ಶರೀಫ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಮುಖ್ಯ ಭಾಷಣಕಾರರಾಗಿ ಮುಫ್ತಿ ಮೆಹಬೂಬ್ ರಝಾ ಬರೇಲಿ ಶರೀಫ್, ಮುಫ್ತಿ ನಾವೇದ್ ರಝಾ ಬರೇಲಿ ಶರೀಫ್, ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್ಕಟ್ಟೆ, ವೌಲನಾ ಅಬು ಸೂಫಿಯಾನ್ ಇಬ್ರಾಹೀಂ ಮದನಿ ಹಾಗೂ ಹಲವು ಉಲಮಾ-ಉಮರಾಗಳು ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story