ಭ್ರಷ್ಟಾಚಾರ ನಿರ್ಮೂಲನಾ ಮಾಹಿತಿ ಕಾರ್ಯಗಾರ
ಉಡುಪಿ, ನ.30: ಉಡುಪಿಯ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ವತಿಯಿಂದ ಕುಂದಾಪುರ ತಾಲೂಕು ಹಂಗಳೂರು ಗ್ರಾಪಂನಲ್ಲಿ ಶುಕ್ರವಾರ ಭ್ರಷ್ಟಾಚಾರ ನಿರ್ಮೂಲನಾ ಮಾಹಿತಿ ಕಾರ್ಯಾಗಾರ ಹಾಗೂ ಜನಸಂಪರ್ಕ ಸಬೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ, ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕ ದಿನಕರ ಶೆಟ್ಟಿ, ಭ್ರಷ್ಟಾಚಾರ ಪಿಡುಗು ಹಾಗೂ ಅದರ ನಿರ್ಮೂಲನೆ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕರು ಭ್ರಷ್ಟಾಚಾರದ ಬಗ್ಗೆ ಜಾಗೃತರಾಗಿ ಭ್ರಷ್ಟಾಚಾರಿಗಳ ವಿರುದ್ಧ ದೂರು ನೀಡಿ, ಅವರನ್ನು ಕಾನೂನಿನ ಕುಣಿಕೆಗೆ ಒಳಪಡಿಸುವವರೆಗೆ ್ರಷ್ಟಾಚಾರ ತಡೆಗಟ್ಟಲು ಅಸಾಧ್ಯ. ಆದ್ದರಿಂದ ಭ್ರಷ್ಟಾಚಾರ ತಡೆಗಟ್ಟುವಲ್ಲಿ ಸಾರ್ವಜನಿಕರ ಸಕಾರ ಅತ್ಯಗತ್ಯ ಎಂದು ತಿಳಿಸಿದರು.
ಯಾವುದೇ ಸಾರ್ವಜನಿಕ ಸೇವಕರು ಲಂಚಕ್ಕಾಗಿ ಪೀಡಿಸಿದರೆ, ಲಂಚ ತೆಗೆದು ಕೊಳ್ಳುತ್ತಿದ್ದರೆ, ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಹಾಗೂ ಅಕ್ರಮವಾಗಿ ಹೆಚ್ಚಿನ ಸಂಪತ್ತನ್ನು ಹೊಂದಿದ್ದರೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದರು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಲಂಚ ತಡೆ ಗಟ್ಟುವಲ್ಲಿ ಕೈಜೋಡಿಸಬೇಕೆಂದು ಗ್ರಾಮಸ್ಥರಿಗೆ ಮನವಿ ಮಾಡಿದರು
ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ನಿರೀಕ್ಷಕ ಜಯರಾಮಗೌಡ ಭ್ರಷ್ಟಾಚಾರ ನಿರ್ಮೂಲನೆ ಕುರಿತು ತಿಳುವಳಿಕೆ ನೀಡಿದರು. ಕಾರ್ಯಕ್ರಮ ದಲ್ಲಿ ಗ್ರಾಪಂ ಅಧ್ಯಕ್ಷ ಜಲಜ ಚಂದನ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ರಾಜೇಶ ಕೆ.ಸಿ ಪಾಲ್ಗೊಂಡಿದ್ದರು.