ಹೊಸಂಗಡಿ: ಸಂತೆಕಟ್ಟೆ ಮದರಸದಲ್ಲಿ ಮೀಲಾದುನ್ನಬಿ, ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ

ಮಂಗಳೂರು, ಡಿ.3: ಹಳೆಯಂಗಡಿಯ ಹೊಸಂಗಡಿ ಕದಿಕೆ ಜುಮಾ ಮಸೀದಿಯ ಆಡಳಿತಕ್ಕೊಳಪಡುವ ಸಂತೆಕಟ್ಟೆ ಹಿಮಾಯತುಲ್ ಇಸ್ಲಾಂ ಮದರಸದ ವತಿಯಿಂದ ವಿಶ್ವ ಪ್ರವಾದಿ ಮುಹಮ್ಮದ್ (ಸ.ಅ.) ಅವರ 1493ನೇ ಜನ್ಮದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ರವಿವಾರ ಜುಮಾ ಮಸೀದಿಯ ವಠಾರದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೊಸಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಖತೀಬ್ ಕೆ.ಎಂ. ಅಬ್ದುಲ್ ರಹಿಮಾನ್ ಫೈಝಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಪ್ರತಿಭಾ ಕಾರಂಜಿಗಳು ಪೂರಕ ಎಂದು ನುಡಿದರು.
ದುವಾ ಆಶೀರ್ವಚನ ನೀಡಿ ಮಾತನಾಡಿದ ಶೈಖುನಾ ಅಲ್ಹಾಜ್ ಅಝರ್ ಫೈಝಿ ಬೊಳ್ಳೂರು ಉಸ್ತಾದ್, ಮಕ್ಕಳು ಪಠ್ಯ ಚಟುವಟಿಕೆಗಳ ಜೊತೆಗೆ ಪ್ರತಿಭಾ ಕಾರಂಜಿಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಜ್ಞಾನ ವೃದ್ಧಿಸಿಕೊಳ್ಳಬಹುದು. ಮಕ್ಕಳ ಜ್ಞಾನ ವೃದ್ಧಿಗೆ ಹೆತ್ತವರು ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು.
ಸಾಗ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ಲಾ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಹಿಮಾಯತುಲ್ ಇಸ್ಲಾಂ ಮದರಸ ಕಮಿಟಿಯ ಅಧ್ಯಕ್ಷ ಅಬ್ದುಲ್ ರಝಾಕ್ ಮೂಡುತೋಟ ಸಾಗ್, ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್ ಕದಿಕೆ, ಕಾರ್ಯದರ್ಶಿ ಫಕ್ರುದ್ದೀನ್, ಸಂತೆಕಟ್ಟೆ ಮದರಸದ ಗೌರವಾಧ್ಯಕ್ಷ ಸಾಹುಲ್ ಹಮೀದ್ ಸಂತೆಕಟ್ಟೆ, ಹಾಜೀ ಇಕ್ಬಾಲ್ ಅಹ್ಮದ್ ಮಂಗಳೂರು, ಉರೂಸ್ ಸಮಿತಿಯ ಅಧ್ಯಕ್ಷ ಬಶೀರ್ ಕಲ್ಲಾಪು, ಮಿರ್ಜಾ ಅಹ್ಮದ್ ಗುಂಡು, ಇಂದಿರಾನಗರ ಖೀಲ್ರಿಯಾ ಮದರಸದ ಸದರ್ ಮುಅಲ್ಲಿಂ ಜಿ.ಎಂ. ಹನೀಫ್ ದಾರಿಮಿ, ಅಬ್ದುಲ್ ರಶೀದ್ ಮುಸ್ಲಿಯಾರ್, ಮೌಲಾನಾ ಮುಹಮ್ಮದ್ ಹನೀಫ್ ಝಿಯಾಹಿ ಮತ್ತಿತರರು ಉಪಸ್ಥಿತರಿದ್ದರು.