ವಿವಿಐಪಿ ಹೆಲಿಕಪ್ಟಾರ್ ಹಗರಣ ಸಿಬಿಐ ಮನವಿಗೆ ದಿಲ್ಲಿ ನ್ಯಾಯಾಲಯದ ಅನುಮತಿ
ಹೊಸದಿಲ್ಲಿ, ಡಿ. 11: ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ಆರೋಪ ಪಟ್ಟಿಯಲ್ಲಿ ಹೆಸರಿಸಲಾದ ಮದ್ಯವರ್ತಿ ಕ್ರಿಶ್ಚಿಯನ್ ಮಿಶಲ್ ಅವರ ಸಹಿ ಮಾದರಿ ಹಾಗೂ ಕೈಬರಹದ ನಮೂನೆ ತೆಗೆದುಕೊಳ್ಳಲು ಅನುಮತಿ ಕೋರಿ ಸಿಬಿಐ ಸಲ್ಲಿಸಿದ ಮನವಿಗೆ ದಿಲ್ಲಿ ನ್ಯಾಯಾಲಯ ಮಂಗಳವಾರ ಒಪ್ಪಿಗೆ ನೀಡಿದೆ.
ಸಿಬಿಐ ಮನವಿ ಬಗ್ಗೆ ಅವರಿಗೆ ಯಾವುದೇ ಆಕ್ಷೇಪ ಇಲ್ಲ ಹಾಗೂ ತಾನು ತನ್ನ ಕಕ್ಷಿದಾರನ ಅಮಾಯಕತೆ ಸಾಬೀತುಪಡಿಸಲು ಬಯಸುತ್ತೇನೆ ಎಂದು ಮಿಶೆಲ್ ಪರ ವಕೀಲ ಹೇಳಿದ ಬಳಿಕ ಸಿಬಿಐ ವಿಶೇಷ ನ್ಯಾಯಮೂರ್ತಿ ಅರವಿಂದ್ ಕುಮಾರ್ ಆದೇಶ ಮಂಜೂರು ಮಾಡಿದ್ದಾರೆ. ಈಗಾಗಲೇ ತನ್ನ ವಶದಲ್ಲಿ ಇರುವ ದಾಖಲೆಗಳೊಂದಿಗೆ ಹೋಲಿಸಲು ಮಿಶೆಲ್ ಅವರ ಕೈಬರಹ ಹಾಗೂ ಸಹಿ ನಮೂನೆ ಅಗತ್ಯತೆ ಇದೆ ಎಂದು ಸಿಬಿಐ ಹೇಳಿದೆ.
Next Story