ನೌಕಾಪಡೆಗೆ ಡಿಎಸ್ಆರ್ವಿ ವ್ಯವಸ್ಥೆ
ಮುಂಬೈ, ಡಿ.12: ಮುಂಬೈಯ ನೌಕಾಪಡೆಯ ಧಕ್ಕೆಪ್ರದೇಶದಲ್ಲಿ ಬುಧವಾರ ಭಾರತೀಯ ನೌಕಾಪಡೆಗೆ ಪ್ರಪ್ರಥಮ ಡೀಪ್ ಸಬ್ಮರ್ಜೆನ್ಸ್ ರೆಸ್ಕೂ ವೆಹಿಕಲ್(ಡಿಎಸ್ಆರ್ವಿ) ವ್ಯವಸ್ಥೆಯನ್ನು ನಿಯುಕ್ತಿಗೊಳಿಸಲಾಗಿದೆ. ಆಳ ನೀರಿನಡಿ ಸಿಲುಕಿಕೊಂಡ ಸಬ್ಮೆರಿನ್ನಲ್ಲಿರುವ ಸಿಬ್ಬಂದಿಯನ್ನು ಡಿಎಸ್ಆರ್ವಿ ಮೂಲಕ ರಕ್ಷಿಸಲು ಸಾಧ್ಯವಾಗುತ್ತದೆ. ಇದರೊಂದಿಗೆ ಈ ಅತ್ಯಾಧುನಿಕ ವ್ಯವಸ್ಥೆಯನ್ನು ಹೊಂದಿರುವ ಕೆಲವೇ ಆಯ್ದ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಗೊಂಡಿದೆ.
ನೀರಿನಡಿ ಸುಮಾರು 650 ಮೀಟರ್ ಆಳದಲ್ಲಿ ಕಾರ್ಯಾಚರಿಸುವ ಡಿಎಸ್ಆರ್ವಿಯಲ್ಲಿ ಸುಮಾರು 15 ಮಂದಿಗೆ ಸ್ಥಳಾವಕಾಶವಿದೆ. ಇನ್ನೊಂದು ಡಿಎಸ್ಆರ್ವಿಯನ್ನು ವಿಶಾಖಪಟ್ಟಣಂನಲ್ಲಿರುವ ಪೂರ್ವ ನೌಕಾನೆಲೆಯಲ್ಲಿ ನಿಯುಕ್ತಿಗೊಳಿಸಲಾಗುವುದು. ಡಿಎಸ್ಆರ್ವಿ ವ್ಯವಸ್ಥೆಯ ಸೇರ್ಪಡೆಯಿಂದ ಭಾರತೀಯ ನೌಕಾಪಡೆಯ ಸಬ್ಮೆರಿನ್ ರಕ್ಷಣಾ ಸಾಮರ್ಥ್ಯ ವರ್ಧಿಸಿದಂತಾಗಿದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ತಿಳಿಸಿದ್ದಾರೆ.
Next Story