ಮಹಾರಾಷ್ಟ್ರ: ಹಾಡಹಗಲೇ ಮರ್ಯಾದಾ ಹತ್ಯೆ?
ಬೀಡ್(ಮಹಾರಾಷ್ಟ್ರ), ಡಿ.20: ರಾಜ್ಯದ ಬೀಡ್ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜೊಂದರ ಹೊರಗೆ 25ರ ಹರೆಯದ ಯುವಕನನ್ನು ಹಾಡಹಗಲೇ ಇರಿದು ಸಾಯಿಸಿರುವ ಘಟನೆ ನಡೆದಿದೆ.
ಇಲ್ಲಿನ ಆದಿತ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಸುಮಿತ್ ಶಿವಾಜಿರಾವ್ ವಾಘ್ಮೋರೆ ತನ್ನದೇ ಸಹಪಾಠಿ ಯುವತಿಯನ್ನು ಯುವತಿಯ ಮನೆಯವರ ಇಚ್ಛೆಗೆ ವಿರುದ್ಧವಾಗಿ ಎರಡು ತಿಂಗಳ ಹಿಂದೆ ವಿವಾಹವಾಗಿದ್ದ.
ಸುಮಿತ್ ಹಾಗೂ ಆತನ ಪತ್ನಿ ಬುಧವಾರ ಕಾಲೇಜಿನಲ್ಲಿ ಪರೀಕ್ಷ್ಷೆೆ ಬರೆದು ಹೊರಬರುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಸುಮಿತ್ ಮೇಲೆ ದಾಳಿ ಮಾಡಿ ಇರಿದು ಪರಾರಿಯಾಗಿದ್ದಾರೆ. ಸುಮಿತ್ರನ್ನು ತಕ್ಷಣವೇ ಬೀಡ್ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿಗೆ ತಲುಪುವಾಗ ಯುವಕ ಮೃತಪಟ್ಟಿದ್ದಾರೆ.
ಇದೊಂದು ಮರ್ಯಾದಾ ಹತ್ಯೆಯಾಗಿದೆ ಎಂದು ಶಂಕೆ ವ್ಯಕ್ತಪಡಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Next Story