ಉಪೇಂದ್ರ ಕುಶ್ವಾಹ್ ಯುಪಿಎ ಮೈತ್ರಿಕೂಟಕ್ಕೆ ಸೇರ್ಪಡೆ
ಹೊಸದಿಲ್ಲಿ, ಡಿ.20: ರಾಷ್ಟ್ರೀಯ ಸಮತಾ ಪಾರ್ಟಿ(ಆರ್ಎಲ್ಎಸ್ಪಿ) ಗುರುವಾರ ಯುಪಿಎಗೆ ಸೇರ್ಪಡೆಯಾಗಿದ್ದು ಬಿಹಾರದಲ್ಲಿ ಯುಪಿಎಯ ಮೈತ್ರಿಕೂಟದ ಭಾಗವಾಗಲಿದೆ.
ಉಪೇಂದ್ರ ಕುಶ್ವಾಹ್ ನೇತೃತ್ವದ ಆರ್ಎಲ್ಎಸ್ಪಿ ಡಿ.10 ರಂದು ಎನ್ಡಿಎ ಮೈತ್ರಿಕೂಟವನ್ನು ತೊರೆದಿತ್ತು. ಕುಶ್ವಾಹ್ ಕೇಂದ್ರ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. 2019ರ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ವಿಚಾರದಲ್ಲಿ ಬಿಜೆಪಿ-ಜೆಡಿಯುನೊಂದಿಗೆ ಭಿನ್ನಮತ ಉಂಟಾದ ಕಾರಣ ಎನ್ಡಿಎಯಿಂದ ಆರ್ಎಲ್ಎಸ್ಪಿ ಹೊರ ಬಂದಿತ್ತು.
ಇಂದು ಕಾಂಗ್ರೆಸ್ ಏರ್ಪಡಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕುಶ್ವಾಹ್ ಯುಪಿಎಗೆ ಸೇರ್ಪಡೆಯಾಗುವುದಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಆರ್ಜೆಡಿಯ ತೇಜಸ್ವಿ ಯಾದವ್ ಹಾಗೂ ಎಚ್ಎಎಂನ ಜಿತನ್ ರಾಮ್ ಮಂಜಿ ಉಪಸ್ಥಿತರಿದ್ದರು
Next Story