ಸಾಲಿಗ್ರಾಮ ಪಪಂ: ಆಯವ್ಯಯ ಪಟ್ಟಿ- ಸಲಹೆಗೆ ಆಹ್ವಾನ
ಉಡುಪಿ, ಡಿ. 27: ಸಾಲಿಗ್ರಾಮ ಪಟ್ಟಣ ಪಂಚಾಯತ್ನಲ್ಲಿ 2019-20ನೇ ಸಾಲಿಗೆ ಮುಂಗಡ ಆಯವ್ಯಯ ಪಟ್ಟಿ ತಯಾರಿಸುವ ಬಗ್ಗೆ ಸಾರ್ವಜನಿಕರಿಂದ ಸೂಕ್ತ ಸಲಹೆ, ಸೂಚನೆ ಹಾಗೂ ಮಾಹಿತಿಯನ್ನು ಆಹ್ವಾನಿಸಲಾಗಿದೆ. ಜನವರಿ 5ರೊಳಗೆ ಸಲಹೆ, ಸೂಚನೆ ಮತ್ತು ಮಾಹಿತಿಯನ್ನು ಲಿಖಿತ ರೂಪದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಸಲ್ಲಿಸುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ನ ಪ್ರಕಟಣೆ ತಿಳಿಸಿದೆ.
Next Story