ಪ್ರವಾದಿ ನಿಂದನೆ: ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯದಿಂದ ದೂರು

ಉಪ್ಪಿನಂಗಡಿ, ಡಿ. 30: ಕನ್ನಡ ಖಾಸಗಿ ಚಾನೆಲ್ ನಿರೂಪಕ ಕೋಮುಪ್ರಚೋದನೆ ರೂಪದಲ್ಲಿ ಪ್ರವಾದಿ (ಸ.ಅ)ರನ್ನು ನಿಂದನಾತ್ಮಕ ವಿಮರ್ಶೆ ನಡೆಸಿದ್ದುದರ ವಿರುದ್ಧ ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯ ಸಮಿತಿ ವತಿಯಿಂದ ಉಪ್ಪಿನಂಗಡಿ ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯ ಪ್ರ. ಕಾರ್ಯದರ್ಶಿ ಹಾರಿಸ್ ಕೌಸರಿ ಕೋಲ್ಪೆ, ಅಬೂಬಕರ್ ಪೆರ್ನೆ, ಉಪ್ಪಿನಂಗಡಿ ಕ್ಲಸ್ಟರ್ ಕಾರ್ಯದರ್ಶಿ ಜಬ್ಬಾರ್ ನಿನ್ನಿಕಲ್ಲು, ಇಲ್ಯಾಸ್ ಕರಾಯ ಕ್ಯಾಂಪಸ್ ವಿಂಗ್ ನಾಯಕ ಇರ್ಶಾದ್ ಕರಾಯ ಸೇರಿದಂತೆ ವಲಯ ಸಮಿತಿ ಮುಖಂಡರು ಉಪಸ್ಥಿತರಿದ್ದರು.
Next Story