ಅಳಕೆ -ಕುದ್ರೋಳಿ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ

ಮಂಗಳೂರು, ಡಿ.30: ನಗರದ ರಾಮಕೃಷ್ಣ ಮಿಶನ್ ವತಿಯಿಂದ ನಡೆಯುತ್ತಿರುವ 4ನೆ ಹಂತದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಇಂದು ಮುಂಜಾನೆಯಿಂದ ನಗರದ ಅಳಕೆ -ಕುದ್ರೋಳಿ ಮಣ್ಣ ಗುಡ್ಡೆ ಪರಿಸರದಲ್ಲಿ ನಡೆಯಿತು.
ಶ್ರೀರಾಮಕೃಷ್ಣ ಮಠದ ಸ್ವಾಮಿ ಏಕ ಗಮ್ಯಾನಂದಾಜಿಯವರ ಅವರ ನೇತೃತ್ವದಲ್ಲಿ ಸ್ವಯಂ ಸೇವಕರ ತಂಡ ನಗರದ ಕುದ್ರೋಳಿ -ಅಳಕೆ ರಸ್ತೆ ಸ್ವಚ್ಛತೆ ಯೊಂದಿಗೆ ರಸ್ತೆ ಪಕ್ಕ ಬಿದ್ದಿದ್ದ ಕಾಂಕ್ರೀಟ್ ತ್ಯಾಜ್ಯಗಳನ್ನು ಯಂತ್ರಗಳ ಸಹಾಯದಿಂದ ತೆರವು ಗೊಳಿಸುವ ಕಾರ್ಯಾಚರಣೆ ನಡೆಸಿದರು.
ಜೊತೆಗೆ ನಗರ ಸುಂದರೀಕರಣ ಕೆಲಸವನ್ನು ಸ್ವಯಂ ಸೇವಕರು ನಡೆಸಿದರು.
ಗ್ರಾಮ ಸ್ವಚ್ಛತಾ ಕಾರ್ಯಕ್ರಮ:- ಮಂಗಳೂರು ಹೊರವಲಯದ ಗ್ರಾಮಾಂತರ ಪ್ರದೇಶದಲ್ಲಿ ಸ್ವಯಂ ಸೇವಕರ ತಂಡ ಗ್ರಾಮ ಸ್ವಚ್ಛತಾ ಕೆಲಸವನ್ನು ಒಳಮೊಗ್ರು, ಇರುವತ್ತೂರು, ಜೋಕಟ್ಟೆ, ಪಡುಪಣಂಬೂರು, ಜೋಕಟ್ಟೆ, ಮೈಂದ ಗುರಿ, ಅರಂತೋಡು, ಕೊಣಾಜೆ, ಮುನ್ನೂರು ಮತ್ತು ಮೇರ್ಲ ಪದವಿನಲ್ಲಿ ನಡೆಯಿತು.
ಎಂಆರ್ಪಿಎಲ್ ಮತ್ತು ನಿಟ್ಟೆ ಶಿಕ್ಷಣ ಸಂಸ್ಥೆಗಳು ಇಂದಿನ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಿಗೆ ಉಪಹಾರ ವ್ಯವಸ್ಥೆ ನೀಡಲು ಸಹಕಾರ ನೀಡಿದೆ ಎಂದು ಎಂದು ಅಭಿಯಾನದ ಪ್ರಧಾನ ಸಂಚಾಲಕ ಸ್ವಾಮಿ ಚಿದಂಬರಾನಂದ ತಿಳಿಸಿದರು.