ಮಂಗಳೂರು: ಜೆಡಿಎಸ್ನಿಂದ ಮನಪಾ ಚುನಾವಣಾ ಸಿದ್ಧತಾ ಸಭೆ

ಮಂಗಳೂರು, ಡಿ.31: ಜೆಡಿಎಸ್ ವತಿಯಿಂದ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಸಿದ್ಧತೆಗೆ ಸಂಬಂಧಿಸಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್ ಹಾಗೂ ಬೂತ್ ಮಟ್ಟದ ಪ್ರತಿನಿಧಿಗಳ ಸಭೆ ಇಂದು ಪಕ್ಷದ ಕಚೇರಿಯಲ್ಲಿ ನಡೆಯಿತು.
ಕ್ಷೇತ್ರದ ಅಧ್ಯಕ್ಷ ವಸಂತ ಪೂಜಾರಿ ಮಾತನಾಡಿ, ವಾರ್ಡ್ನಲ್ಲಿ ಮುಂಬರುವ ಚುನಾವಣೆಯಲ್ಲಿ ಪಕ್ಷದ ನಿಷ್ಠೆ ಹಾಗೂ ಸೇವೆಯನ್ನು ಪರಿಗಣಿಸಿ ಆಕಾಂಕ್ಷಿ ಅಭ್ಯರ್ಥಿಗಳಲ್ಲಿ ಆಯ್ಕೆ ಮಾಡಲಾಗುವುದು ಎಂದರು.
ಬಜಾಲ್ ವಾರ್ಡ್ ಇಝಾ ಬಜಾಲ್ರವರಿಗೆ ಅರ್ಜಿಯನ್ನು ಹಸ್ತಾಂತರಿಸುವ ಮೂಲಕ ಸಾಂಕೇತಿತವಾಗಿ ಚುನಾವಣಾ ಸಿದ್ಧತೆಗೆ ಚಾಲನೆ ನೀಡಿದರು. ಮನಪಾ ಸದಸ್ಯ ಅಝೀಝ್ ಕುದ್ರೋಳಿಯವರು ಈ ಸಂದರ್ಭ ತಮ್ಮ ಎರಡು ಅವಧಿಯ 10 ರ್ಷಗಳ ಅನುಭವ ಹಂಚಿಕೊಂಡರು
ಜಿಲ್ಲಾ ವಕ್ತಾರ ಸುಶೀಲ್ ನೊರೊನ್ನಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ಪೂರ್ವ ತಯಾರಿ ನಡೆಸುವ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಹೆಗ್ಡೆ, ಎನ್.ಪಿ. ಪುಷ್ಪರಾಜನ್, ರಾಜ್ಯ ಮೀನುಗಾರ ಘಟಕದ ಅಧ್ಯಕ್ಷ ರತ್ನಾಕರ್ ಸುವರ್ಣ, ಲತೀಫ್ ಬೆಂಗ್ರೆ, ಫ್ರಾನ್ಸಿಸ್ ಫೆರ್ನಾಂಡಿಸ್ ಮಾತನಾಡಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಕೃಷ್ಣ ಅತ್ತಾವರ, ಲತೀಫ್ ವಲಚ್ಚಿಲ್, ರಮೇಶ್ ಎಸ್, ಮುಹಮ್ಮದ್ ಬೆಂಗ್ರೆ, ಸದಾಶಿವ ಹೆಗ್ಡೆ, ಶ್ರೀನಾಥ್ ರೈ, ಶಾಲಿನಿ ರೈ, ವಿನ್ಸೆಂಟ್ ಡಿಸೋಜಾ, ರಘು, ಭಾರತಿ, ಪ್ರವೀಣ್, ಆರಿಫ್, ಕನಕದಾಸ್ ಕೂಳೂರು, ಶಿವಕುಮಾರ್, ಅನಿಲ್ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ರಾಂಗಣೇಶ್ ಸ್ವಾಗತಿಸಿ, ಎನ್.ಪಿ. ಪುಷ್ಪರಾಜನ್ ವಂದಿಸಿದರು.