ಪ್ರವಾದಿ ನಿಂದನೆ: ಅಜಿತ್ ವಿರುದ್ಧ ಕ್ರಮಕ್ಕೆ ಒತ್ತಾಯ
ಮಂಗಳೂರು, ಡಿ.31: ಪ್ರವಾದಿ ಮುಹಮ್ಮದ್ (ಸ)ರ ಬಗ್ಗೆ ನಿಂದಿಸಿ ಮಾತನಾಡಿದ ಖಾಸಗಿ ವಾಹಿನಿಯ ನಿರೂಪಕ ಅಜಿತ್ ವಿರುದ್ಧ ಸೂಕ್ತ ಕಾನೂನು ಕೈಗೊಳ್ಳುವಂತೆ ಸುನ್ನೀ ಸಂದೇಶ ಪತ್ರಿಕೆಯ ಹೈದರ್ ದಾರಿಮಿ, ಉಮರ್ ದಾರಿಮಿ, ಮುಸ್ತಫಾ ಫೈಝಿ, ಕುಕ್ಕಿಲ ದಾರಿಮಿ, ಮಜೀದ್ ಹಾಜಿ, ನೌಶಾದ್ ಹಾಜಿ, ಅಬ್ದುಲ್ಲ ಹಾಜಿ, ಸಿದ್ದೀಖ್ ಫೈಝಿ, ಬಶೀರ್ ಅಝ್ಹರಿ ಒತ್ತಾಯಿಸಿದ್ದಾರೆ.
ಮಾಂಸ ವ್ಯಾಪಾರಸ್ಥರ ಸಂಘ: ಪ್ರವಾದಿ ಮುಹಮ್ಮದ್ (ಸ) ಅವರನ್ನು ಅಜಿತ್ ಹನುಮಕ್ಕನವರ್ ನಿಂದಿಸಿ ಅವಮಾನಿಸಿದ ಬಗ್ಗೆ ಆಕ್ರೋಶಗೊಂಡಿರುವ ವಿವಿಧ ಮುಸ್ಲಿಂ ಸಂಘಟನೆಗಳು ರಾಜ್ಯಾದ್ಯಂತ ವಿವಿಧ ಠಾಣೆಗಳಲ್ಲಿ ನೂರಾರು ದೂರುಗಳನ್ನು ನೀಡಿದ್ದರೂ ಕೂಡ ರಾಜ್ಯ ಸರಕಾರವು ಆತನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗದಿರುವ ಬಗ್ಗೆ ಮಾಂಸ ವ್ಯಾಪಾರಸ್ಥರ ಸಂಘದ ಮುಖಂಡರಾದ ಯಾಸೀನ್ ಕುದ್ರೋಳಿ, ಅಲಿ ಹಸನ್, ಕುದ್ರೋಳಿ ಕಸಾಯಿಖಾನೆಯ ಗುತ್ತಿಗೆದಾರ ಜೆ. ಅಬ್ದುಲ್ ಖಾದರ್ ಖಂಡಿಸಿದ್ದಾರೆ.
Next Story