ಶಬರಿಮಲೆ ಪ್ರವೇಶಿಸಲೆತ್ನಿಸಿದ ಶ್ರೀಲಂಕಾ ಮಹಿಳೆಗೆ ತಡೆ
ತಿರುವನಂತಪುರ, ಜ.4: ಕೇರಳದ ಪ್ರಸಿದ್ಧ ಕ್ಷೇತ್ರವಾಗಿರುವ ಶಬರಿಮಲೆಯ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿದ ಹಿನ್ನೆಲೆಯಲ್ಲಿ ಕೇರಳ ರಾಜ್ಯಾದ್ಯಂತ ಹಿಂಸಾಚಾರ ಮುಂದುವರಿದಿದ್ದಂತೆ , ಗುರುವಾರ ರಾತ್ರಿ ತಮಿಳುನಾಡು ಮೂಲದ ಶ್ರೀಲಂಕಾದ ಮಹಿಳೆ ಶಬರಿಮಲೆ ಪ್ರವೇಶಿಸಲೆತ್ನಿಸಿದ್ದು, ಅವರನ್ನು ತಡೆಯಲಾಗಿದೆ.
ಶಶಿಕಲಾ ಎಂಬ ಮಹಿಳೆ ತನ್ನ ಪತಿಯೊಂದಿಗೆ 18 ಮೆಟ್ಟಿಲುಗಳನ್ನೇರಿ ದೇವರ ದರ್ಶನ ಪಡೆದಿದ್ದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಬುಧವಾರ 42 ವರ್ಷದ ಬಿಂದು ಮತ್ತು 44 ವರ್ಷದ ಕನಕದುರ್ಗಾ ಶಬರಿಮಲೆ ದೇಗುಲ ಪ್ರವೇಶಿಸಿದ್ದರು.
Next Story