ಶಬರಿಮಲೆ ಪ್ರವೇಶಿಸಿದ್ದ ಮಹಿಳೆಯ ಮೇಲೆ ಸಂಬಂಧಿಕರ ಹಲ್ಲೆ: ಆಸ್ಪತ್ರೆಗೆ ದಾಖಲು
ಕನಕ ದುರ್ಗಾ ಹಾಗೂ ಬಿಂದು
ತಿರುವನಂತಪುರ, ಜ.15: ಮೊದಲ ಬಾರಿ ಕೇರಳದ ಶಬರಿಮಲೆ ದೇಗುಲವನ್ನು ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದ ಇಬ್ಬರು ಮಹಿಳೆಯರ ಪೈಕಿ ಒಬ್ಬರಾಗಿದ್ದ ಕನಕಾ ದುರ್ಗಾ ಅವರು ಸೋಮವಾರ ಮನೆಗೆ ವಾಪಸಾದ ಸಂದರ್ಭದಲ್ಲಿ ಅತ್ತೆ ಅವರ ಹಲ್ಲೆ ನಡೆಸಿದ್ದು ತಲೆಗೆ ಏಟು ಬಿದ್ದ ಕಾರಣ ಅವರನ್ನು ಮಲ್ಲಪ್ಪುರಂ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಶಬರಿಮಲೆ ದೇಗುಲಕ್ಕೆ ಪ್ರವೇಶಿಸಿದ ಬಳಿಕ 39ರ ಹರೆಯದ ಕನಕದುರ್ಗಾ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದರು. ಕನಕ ದುರ್ಗಾ ಹಾಗೂ ಬಿಂದು ಅಮ್ಮಣ್ಣಿ ಶಬರಿಮಲೆ ಪ್ರವೇಶಿಸಿದ ಬಳಿಕ ರಾಜ್ಯವ್ಯಾಪಿ ಪ್ರತಿಭಟನೆ ನಡೆದಿತ್ತು.
ನಮಗೆ ಪ್ರತಿಭಟನೆಕಾರರಿಂದ ಬೆದರಿಕೆ ಬರುತ್ತಿದ್ದು, ಸರಕಾರ ತಮಗೆ ರಕ್ಷಣೆ ನೀಡುವ ಭರವಸೆಯಲ್ಲಿದ್ದೇವೆ. ಶೀಘ್ರವೇ ಮನೆಗೆ ಮರಳುವ ಯೋಚನೆಯಲ್ಲಿದ್ದೇವೆ ಎಂದು ಕೊಚ್ಚಿ ಯ ಹೊರವಲಯದ ಅಜ್ಞಾತಸ್ಥಳದಿಂದ ಶಬರಿಮಲೆ ಪ್ರವೇಶಿಸಿದ್ದ ಮಹಿಳೆಯೊಬ್ಬರು ಹೇಳಿದ್ದರು.
Next Story