ಸುಂದರ ಮುಖದಿಂದ ಮತ ಗೆಲ್ಲಲು ಸಾಧ್ಯವಿಲ್ಲ: ಪ್ರಿಯಾಂಕಾ ಬಗ್ಗೆ ಬಿಹಾರ ಸಚಿವನ ಪ್ರತಿಕ್ರಿಯೆ
ಪಾಟ್ನಾ, ಜ.25: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪೂರ್ವ ಉತ್ತರಪ್ರದೇಶದ ಪಕ್ಷದ ಉಸ್ತುವಾರಿಯಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶ ರಾಜಕೀಯದ ಮೇಲೆ ಪರಿಣಾಮಬೀರಲಿದೆ ಎಂಬ ಚರ್ಚೆಯ ನಡುವೆ ಬಿಜೆಪಿ ನಾಯಕ ಹಾಗೂ ಬಿಹಾರದ ಸಚಿವ ವಿನೋದ್ ನಾರಾಯಣ್ ಜಾ ಎಲ್ಲರೂ ಹುಬ್ಬೇರಿಸುವ ಹೇಳಿಕೆ ನೀಡಿದ್ದಾರೆ.
ಈ ವರ್ಷದ ಎಪ್ರಿಲ್-ಮೇನಲ್ಲಿ ನಡೆಯುವ ಸಂಸತ್ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿವುದರಿಂದ ಲೆಕ್ಕಾಚಾರ ತಲೆಕೆಳಗಾಗಲಿದೆ ಎಂಬ ಮಾತನ್ನು ಅಲ್ಲಗಳೆದ ಜಾ, ‘‘ಸುಂದರ ಮುಖವನ್ನು ನೋಡಿ ಯಾರೂ ಮತ ಹಾಕುವುದಿಲ್ಲ. ಆಕೆಯ ಪತಿ ರಾಬರ್ಟ್ ವಾದ್ರಾ ಭೂಹಗರಣ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆಕೆ ಸುಂದರವಾಗಿದ್ದಾಳೆ. ಅದನ್ನು ಹೊರತುಪಡಿಸಿ ರಾಜಕೀಯ ರಂಗದಲ್ಲಿ ಆಕೆಯ ಸಾಧನೆ ಏನೂ ಇಲ್ಲ’’ ಎಂದರು.
Next Story