‘ಬ್ರೆಕ್ಸಿಟ್’ ಒಪ್ಪಂದ ಅನುಮೋದನೆಗೆ ಪ್ರಯತ್ನಗಳು ತೀವ್ರ
ಲಂಡನ್, ಜ. 27: ಮಾರ್ಚ್ 29ರಂದು ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಮುನ್ನ, ಬ್ರೆಕ್ಸಿಟ್ ಮಸೂದೆಯನ್ನು ಅಂಗೀಕರಿಸಲು ಸರಕಾರ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಬ್ರಿಟಿಶ್ ಸಂಸದರು ಸಂಸತ್ತಿನಲ್ಲಿ ದೀರ್ಘಾವಧಿ ಕುಳಿತುಕೊಳ್ಳಬೇಕಾಗಬಹುದು ಹಾಗೂ ಅವರ ಫೆಬ್ರವರಿ ತಿಂಗಳ ರಜೆಯು ರದ್ದಾಗಬಹುದಾಗಿದೆ.
ಬ್ರಿಟನ್ನ ಹೌಸ್ ಆಫ್ ಕಾಮನ್ಸ್ನಲ್ಲಿ ಶುಕ್ರವಾರಗಳಂದು ಸಾಮಾನ್ಯವಾಗಿ ಅಧಿವೇಶನ ನಡೆಯುವುದಿಲ್ಲ. ಆದರೆ, ಮುಂದಿನ ಶುಕ್ರವಾರಗಳಲ್ಲಿ ಪ್ರಧಾನಿ ತೆರೇಸಾ ಮೇ ಸರಕಾರ ಅಧಿವೇಶನವನ್ನು ನಡೆಸಬಹುದಾಗಿದೆ ಹಾಗೂ ಇತರ ದಿನಗಳಲ್ಲಿ ಸಂಜೆ ಹೆಚ್ಚಿನ ಅವಧಿಗೆ ಅಧಿವೇಶನವನ್ನು ವಿಸ್ತರಿಸುವ ಸಾಧ್ಯತೆಯಿದೆ.
ಫೆಬ್ರವರಿಯ ವಾರದ ಅವಧಿಯ ರಜೆಯನ್ನೂ ಸರಕಾರ ಮರುಪರಿಶೀಲಿಸುತ್ತಿದೆ ಎಂದು ಪ್ರಧಾನಿಯ ಅಧಿಕೃತ ನಿವಾಸ ಡೌನಿಂಗ್ ಸ್ಟ್ರೀಟ್ನ ವಕ್ತಾರರೊಬ್ಬರು ತಿಳಿಸಿದರು.
Next Story