ಅಮಿತ್ ಶಾ ರ್ಯಾಲಿಯ ನಂತರ ಬಿಜೆಪಿ-ಟಿಎಂಸಿ ಕಾರ್ಯಕರ್ತರ ಹೊಡೆದಾಟ
ವಾಹನಗಳಿಗೆ ಬೆಂಕಿ
ಹೊಸದಿಲ್ಲಿ, ಜ.29: ಪಶ್ಚಿಮ ಬಂಗಾಳದ ಮಿದ್ನಾಪೋರ್ ಜಿಲ್ಲೆಯಲ್ಲಿ ಅಮಿತ್ ಶಾ ರ್ಯಾಲಿಯ ನಂತರ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ.
ಟಿಎಂಸಿ ಪಕ್ಷದ ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು, ಬಿಜೆಪಿ ಕಾರ್ಯಕರ್ತರು ಪ್ರಯಾಣಿಸುತ್ತಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಕಾಂತಿಯಲ್ಲಿರುವ ಸ್ಥಳೀಯ ಪಕ್ಷದ ಕಚೇರಿಯ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಟಿಎಂಸಿ ಆರೋಪಿಸಿದೆ.
“ಟಿಎಂಸಿ ನಮ್ಮ ಸಾಮರ್ಥ್ಯವನ್ನು ಕಂಡು ಹೆದರಿದೆ. ಹೀಗಾಗಿ ಹಿಂಸಾಚಾರ ನಡೆಸಿದ್ದಾರೆ. ಪೊಲೀಸರ ಎದುರೇ ಎಲ್ಲಾ ಘಟನೆ ನಡೆದಿರುವುದು ದುರದೃಷ್ಟಕರ, ದಾಳಿಕೋರರು ಮಹಿಳಾ ಕಾರ್ಯಕರ್ತೆಯರನ್ನೂ ಬಿಡಲಿಲ್ಲ” ಎಂದು ಬಿಜೆಪಿಯ ರಾಹುಲ್ ಸಿನ್ಹಾ ಆರೋಪಿಸಿದ್ದಾರೆ.
ಆದರೆ ಈ ಆರೋಪಗಳನ್ನು ಟಿಎಂಸಿ ನಿರಾಕರಿಸಿದ್ದು, ವಾಹನಗಳ ಮೇಲೆ ದಾಳಿ ನಡೆಸಲು ಬಿಜೆಪಿಯು ಜಾರ್ಖಂಡ್ ನಿಂದ ಗೂಂಡಾಗಳನ್ನು ಕರೆಸಿದೆ ಎಂದು ಆರೋಪಿಸಿದೆ.
Next Story