2008ರ ಅಸ್ಸಾಂ ಸರಣಿ ಸ್ಫೋಟ ಪ್ರಕರಣ: ರಂಜನ್ ಡೈಮೇರಿ ಸೇರಿ 10 ಮಂದಿಗೆ ಜೀವಾವಧಿ
ಹೊಸದಿಲ್ಲಿ, ಜ.30: 81 ಜನರ ಸಾವಿಗೆ ಕಾರಣವಾದ 2008ರ ಅಸ್ಸಾಂ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ನ್ಯಾಶನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್ ಡಿಎಫ್ ಬಿ) ಸ್ಥಾಪಕ ರಂಜನ್ ಡೈಮೇರಿ ಮತ್ತು ಇತರ 9 ಮಂದಿಗೆ ಗುವಾಹತಿ ವಿಶೇಷ ಸಿಬಿಐ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಈ ಪ್ರಕರಣದಲ್ಲಿ ಡೈಮೇರಿ ಮತ್ತು ಇತರ 13 ಮಂದಿ ದೋಷಿಗಳು ಎಂದು ಸಿಬಿಐ ಕೋರ್ಟ್ ಸೋಮವಾರ ತೀರ್ಪು ನೀಡಿತ್ತು. ಸರಣಿ ಸ್ಫೋಟದಲ್ಲಿ 81 ಮಂದಿ ಮೃತಪಟ್ಟು, 470 ಮಂದಿ ಗಾಯಗೊಂಡಿದ್ದರು.
Next Story