ರಾಮ, ಕೃಷ್ಣರು ಮಾಡದ ಧೂಮಪಾನ ನಮಗೇಕೆ? ಸಾಧುಗಳಿಗೆ ರಾಮ್ದೇವ್ ಉಪದೇಶ
![ರಾಮ, ಕೃಷ್ಣರು ಮಾಡದ ಧೂಮಪಾನ ನಮಗೇಕೆ? ಸಾಧುಗಳಿಗೆ ರಾಮ್ದೇವ್ ಉಪದೇಶ ರಾಮ, ಕೃಷ್ಣರು ಮಾಡದ ಧೂಮಪಾನ ನಮಗೇಕೆ? ಸಾಧುಗಳಿಗೆ ರಾಮ್ದೇವ್ ಉಪದೇಶ](https://www.varthabharati.in/sites/default/files/images/articles/2019/01/31/175554.jpg)
ಪ್ರಯಾಗ್ರಾಜ್, ಜ.31: ಕುಂಭಮೇಳದ ವೇಳೆ ಧೂಮಪಾನ ತೊರೆಯಬೇಕೆಂದು ಯೋಗ ಗುರು ರಾಮ್ದೇವ್ ಕರೆ ನೀಡಿದ್ದಾರೆ. ನಾವು ಆರಾಧಿಸುತ್ತಿರುವ ರಾಮ, ಕೃಷ್ಣ ಯಾವತ್ತೂ ಧೂಮಪಾನ ಮಾಡಿಲ್ಲ. ಮತ್ತೆ ಯಾಕೆ ನಾವು ಅದನ್ನು ಮಾಡುತ್ತೇವೆ? ಮನೆ, ಸಂಬಂಧಗಳನ್ನೆಲ್ಲ ತೊರೆದು ಸನ್ಯಾಸ ಬದುಕು ಸ್ವೀಕರಿಸಿದವರು. ಧೂಮಪಾನವನ್ನು ಕೂಡ ತೊರೆಯಲು ನಮಗೆ ಸಾಧ್ಯವಾಗಬೇಕೆಂದು ರಾಮ್ದೇವ್ ಹೇಳಿದರು.
ಕುಂಭಮೇಳದಲ್ಲಿ ಹಲವಾರು ಸನ್ಯಾಸಿಗಳ ಕೈಯಿಂದ ಧೂಮಪಾನ ಮಾಡುವ ಚಿಲುಮೆ (ಪೈಪ್) ಯನ್ನು ತೆಗೆದುಕೊಂಡು ಇನ್ನು ಧೂಮಪಾನ ಮಾಡುವುದಿಲ್ಲ ಎನ್ನುವ ಪ್ರತಿಜ್ಞೆಯನ್ನು ರಾಮ್ದೇವ್ ಮಾಡಿಸಿದ್ದಾರೆ. ಸನ್ಯಾಸಿಗಳ ಕೈಯಿಂದ ತೆಗೆದುಕೊಂಡ ಚಿಲುಮೆಗಳನ್ನು ತಾನು ನಿರ್ಮಿಸಲಿರುವ ಮ್ಯೂಸಿಯಂನಲ್ಲಿಡಲಿದ್ದೇನೆ ಎಂದು ಅವರು ಹೇಳಿದರು.
ಧೂಮಪಾನ ಮತ್ತು ತಂಬಾಕು ಸೇವನೆಯನ್ನು ತೊರೆಯಬೇಕೆಂದು ತಾನು ಯುವಕರನ್ನು ಪ್ರೇರೇಪಿಸಿದ್ದೇನೆ. ಮತ್ತೆ ಮಹಾತ್ಮರಾದ ಯೋಗಿಗಳಿಗೆ ಅದು ಸಾಧ್ಯವಾಗಿದೆ ಎಂದು ರಾಮ್ದೇವ್ ಕೇಳಿದರು.
ಧೂಮಪಾನವನ್ನು ಸಂಪೂರ್ಣ ತೊರೆಯಬೇಕೆಂದು ಸನ್ಯಾಸಿಗಳು ಮತ್ತು ಋಷಿಗಳನ್ನು ಅವರು ವಿನಂತಿಸಿದ್ದಾರೆ. ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳ ಮಾರ್ಚ್ ನಾಲ್ಕರಂದು ಕೊನೆಗೊಳ್ಳಲಿದೆ.