ಇದು ಚುನಾವಣಾ ಬಜೆಟ್: ಮನಮೋಹನ್ ಸಿಂಗ್
ಹೊಸದಿಲ್ಲಿ, ಫೆ.1: ಮುಂಬರುವ ಮೇನಲ್ಲಿ ನಡೆಯುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಮಧ್ಯಂತರ ಬಜೆಟನ್ನು ಮಂಡಿಸಿದ್ದಾರೆ ಎಂದು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಬಜೆಟ್ನಲ್ಲಿ ಮಧ್ಯಮವರ್ಗ ಹಾಗೂ ರೈತರಿಗೆ ದೊಡ್ಡ ಕೊಡುಗೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ವಿತ್ತ ಸಚಿವ ಸಿಂಗ್,‘‘ಇಂತಹ ಸಂದರ್ಭದಲ್ಲಿ ರೈತರಿಗೆ ಹಾಗೂ ಮಧ್ಯಮ ವರ್ಗದವರಿಗೆ ರಿಯಾಯಿತಿ ನೀಡಿದರೆ ಸಾಮಾನ್ಯವಾಗಿ ಇದು ಚುನಾವಣೆಯ ಮೇಲೆ ಪರಿಣಾಮಬೀರುತ್ತದೆ’’ ಎಂದರು.
ಮನಮೋಹನ್ ಸಿಂಗ್ ಕೇಂದ್ರದಲ್ಲಿ ನರಸಿಂಹ ರಾವ್ ಸರಕಾರದಲ್ಲಿ ವಿತ್ತ ಸಚಿವರಾಗಿದ್ದರು. 1991ರಲ್ಲಿ ಆರ್ಥಿಕ ಸುಧಾರಣೆಯ ಮೂಲಕ ಸಿಂಗ್ ಮನೆಮಾತಾಗಿದ್ದರು.
Next Story