ಪಾಟ್ನ: ರಾಹುಲ್ ಗಾಂಧಿಯನ್ನು ರಾಮನಂತೆ ಚಿತ್ರಿಸಿದ ಪೋಸ್ಟರ್ ಧ್ವಂಸ
ಪಾಟ್ನ, ಫೆ.2: ಬಿಹಾರದ ರಾಜಧಾನಿ ಪಾಟ್ನದ ಹಲವೆಡೆ ಹಾಕಲಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ರಾಮನಂತೆ ಚಿತ್ರಿಸಿದ ಪೋಸ್ಟರ್ಗಳನ್ನು ಅಪರಿಚಿತ ದುಷ್ಕರ್ಮಿಗಳು ಶುಕ್ರವಾರ ಧ್ವಂಸಗೊಳಿಸಿದ ಘಟನೆ ನಡೆದಿದೆ.
ಈ ಪೋಸ್ಟರ್ಗಳಲ್ಲಿ ರಾಹುಲ್ ಗಾಂಧಿಯ ಜೊತೆ ಕಾಂಗ್ರೆಸ್ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಚಿತ್ರವೂ ಇದೆ. ಈ ಪೋಸ್ಟರ್ನ ಕೆಳಗಡೆ - ಅವರು(ರಾಜ್ಯ ಸರಕಾರ) ರಾಮನಾಮ ಜಪಿಸುತ್ತಿರಲಿ. ನೀವು(ರಾಹುಲ್) ರಾಮದೇವರಂತೆ ಬದುಕಿ ಕಾರ್ಯನಿರ್ವಹಿಸಿ ಎಂದು ಬರೆಯಲಾಗಿದೆ. ಪೋಸ್ಟರ್ಗಳಲ್ಲಿ ರಾಹುಲ್ರನ್ನು ರಾಮದೇವರಂತೆ ಚಿತ್ರಿಸಿ ಧಾರ್ಮಿಕ ಭಾವನೆಗಳಿಗೆ ಘಾಸಿ ಎಸಗಲಾಗಿದೆ ಎಂದು ದೂರಿ ರಾಹುಲ್, ಬಿಹಾರ ಕಾಂಗ್ರೆಸ್ ಅಧ್ಯಕ್ಷ ಮದನ್ಮೋಹನ್ ಝಾ ಹಾಗೂ ಇತರ ನಾಲ್ವರ ವಿರುದ್ಧ ಪಾಟ್ನ ಸಿವಿಲ್ ಕೋರ್ಟ್ನಲ್ಲಿ ದೂರು ದಾಖಲಿಸಲಾಗಿದೆ. ಇದು ಕಾಂಗ್ರೆಸ್ನ ಕೆಳದರ್ಜೆಯ ರಾಜಕೀಯ ಸ್ಟಂಟ್ ಆಗಿದೆ ಎಂದು ಜೆಡಿಯು ಮತ್ತು ಬಿಜೆಪಿ ಟೀಕಿಸಿದೆ.
Next Story