ನೀಟ್-ಪಿಜಿ ಪರೀಕ್ಷೆಯಲ್ಲಿ ಅಶ್ರಫ್ ಕೆಸ್ರಾನಿಗೆ ದೇಶದಲ್ಲೇ ಪ್ರಥಮ ರ್ಯಾಂಕ್
ಗಾಂಧಿನಗರ, ಫೆ. 2: ಅಖಿಲ ಭಾರತ ಸ್ನಾತಕೋತ್ತರ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (ನೀಟ್-ಪಿಜಿ)ಯಲ್ಲಿ ಗುಜರಾತ್ನ ವಡೋದರಾದ ಅಶ್ರಫ್ ಕೆಸ್ರಾನಿ ದೇಶದಲ್ಲೇ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.
ಶಿಕ್ಷಣದ ರಾಷ್ಟ್ರೀಯ ಮಂಡಳಿ (ಎನ್ಬಿಇ) ಗುರುವಾರ ನೀಟ್-ಪಿಜಿ ಫಲಿತಾಂಶ ಪ್ರಕಟಿಸಿದ್ದು, ಬರೋಡಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಅಶ್ರಫ್ 1200 ಅಂಕಗಳಲ್ಲಿ 1,006 ಅಂಕ ಗಳಿಸಿದ್ದಾರೆ. ವೈದ್ಯಕೀಯ ಕೋರ್ಸ್ (ಎಂಡಿ/ಎಂಎಸ್) ಹಾಗೂ ಪಿಜಿ ಡಿಪ್ಲೊಮಾ ಕೋರ್ಸ್ಗಳಿಗೆ ಎನ್ಬಿಇ ನೀಟ್ ಪರೀಕ್ಷೆ ನಡೆಸುತ್ತದೆ. ಭಾರತದ 165 ನಗರಗಳಿಂದ ಒಟ್ಟು 1,48,000 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ 78,660 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅತ್ಯಧಿಕ ಶುಲ್ಕ ನೀಡದೆ, ಅತ್ಯುತ್ತಮ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಬಯಸುತ್ತೇನೆ ಎಂದು ಮಧ್ಯಮ ವರ್ಗದ ಕುಟುಂಬದ ಅಶ್ರಪ್ ಹೇಳಿದ್ದಾರೆ. ಹೊಸದಿಲ್ಲಿಯ ವೌಲನಾ ಆಝಾದ್ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ವೈದ್ಯಕೀಯ ಪದವಿ ಪಡೆಯುವ ತನ್ನ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
Next Story