ಪ್ಯಾರಿಸ್: ಕಟ್ಟಡದಲ್ಲಿ ಬೆಂಕಿ; 7 ಮಂದಿ ಬಲಿ, 30 ಜನರಿಗೆ ಗಾಯ
ಪ್ಯಾರಿಸ್, ಫೆ.5: ಪ್ಯಾರಿಸ್ನ 8 ಮಹಡಿಯ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು ಸುಮಾರು 30 ಜನರು ಗಾಯಗೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಬೃಹತ್ ಕಟ್ಟಡದಲ್ಲಿ ಹೊತ್ತಿಕೊಂಡಿರುವ ಬೆಂಕಿಯನ್ನು ನಿಯಂತ್ರಿಸಲು ಅಗ್ನಿ ಶಾಮಕದಳ ಯಶಸ್ವಿಯಾಗಿದೆ.
ಸುಮಾರು 200 ಅಗ್ನಿಶಾಮಕ ದಳ ಯಂತ್ರಗಳು ಬೆಂಕಿ ನಂದಿಸುವ ಕಾರ್ಯ ನಡೆಸಿದೆ. ಫ್ರೆಂಚ್ ಟಿವಿವೊಂದು ಕಟ್ಟಡ ಕಿಟಕಿಯಲ್ಲಿ ಬೆಂಕಿ ಹೊರಹೊಮ್ಮಿರುವ ದೃಶ್ಯವನ್ನು ಪ್ರಸಾರ ಮಾಡಿದೆ.
‘‘ನಾವು ಹಲವು ರಕ್ಷಣಾ ಕಾರ್ಯವನ್ನು ಮಾಡಿದ್ದು, ಕಟ್ಟಡದಲ್ಲಿ ಸಿಕ್ಕಿಹಾಕಿಕೊಂಡಿದ್ದ 30 ಜನರನ್ನು ತೆರವುಗೊಳಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ’’ ಎಂದು ಅಗ್ನಿ ಶಾಮಕ ದಳದ ವಕ್ತಾರ ಕ್ಯಾಪ್ಟನ್ ಕ್ಲೆಮೆಂಟ್ ಕಾಗ್ನನ್ ಹೇಳಿದ್ದಾರೆ.
Next Story