ಮುಸ್ಲಿಮರನ್ನು ನಾಶ ಮಾಡಬೇಕಾದರೆ ಬಿಜೆಪಿಗೆ ಮತ ಹಾಕಿ ಎಂದ ಬಿಜೆಪಿ ನಾಯಕ
ಬಾರಾಬಂಕಿ, ಎ. 19: “ನೀವು ಮುಸ್ಲಿಮರನ್ನು ನಾಶ ಮಾಡಲು ಬಯಸುತ್ತೀರಾದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ ಹಾಕಿ” ಎಂದು ಹೇಳುವ ಮೂಲಕ ಬಿಜೆಪಿ ನಾಯಕ ರಂಜಿತ್ ಬಹುದ್ದೂರ್ ಶ್ರೀವಾತ್ಸವ ವಿವಾದಕ್ಕೆ ಒಳಗಾಗಿದ್ದಾರೆ.
ದೇಶ ವಿಭಜನೆ ಹೊರತಾಗಿ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಏರಿಕೆಯಾಗುತ್ತಿದೆ. ಶೀಘ್ರದಲ್ಲಿ ಅವರು ಮತದಾನದ ಮೂಲಕ ಅಧಿಕಾರ ಹಿಡಿಯುವ ಸಾಮರ್ಥ್ಯ ಪಡೆಯಲಿದ್ದಾರೆ ಎಂದು ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಮಾತನಾಡಿದ ಸಂದರ್ಭ ಅವರು ಹೇಳಿದರು.
ಲೋಕಸಭೆ ಚುನಾವಣೆ ಬಳಿಕ 10ರಿಂದ 12 ಸಾವಿರ ಮುಸ್ಲಿಮರ ತಲೆ ಬೋಳಿಸಲು ಚೀನಾದಿಂದ ಮೆಷಿನ್ ತರಲಾಗುವುದು ಹಾಗೂ ಅನಂತರ ಅವರನ್ನು ಹಿಂದೂ ಧರ್ಮ ಸ್ವೀಕರಿಸಲು ಒತ್ತಾಯಿಸಲಾಗುವುದು ಎಂದು ಅವರು ಹೇಳಿದ್ದಾರೆ. ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ. ಇಲ್ಲದೇ ಇದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿ ಎಂದು ಶ್ರೀವಾತ್ಸವ ಎಚ್ಚರಿಸಿದ್ದಾರೆ.
Next Story