ಸೌದಿ ಆಡಳಿತವನ್ನು ಸಮರ್ಥಿಸಿದ ಜಮಾಲ್ ಖಶೋಗಿ ಪುತ್ರ
ಸಲಾಹ್ ಖಶೋಗಿ
ದುಬೈ, ಅ. 1: ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ವಿಚಾರದಲ್ಲಿ, ಅವರ ಮಗ ಮಂಗಳವಾರ ಸೌದಿ ಅರೇಬಿಯ ಆಡಳಿತವನ್ನು ಸಮರ್ಥಿಸಿಕೊಂಡಿದ್ದಾರೆ.
“ಸೌದಿ ಅರೇಬಿಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ” ಎಂದು ಸಲಾಹ್ ಖಶೋಗಿ ಎಂದು ಅವರು ಹೇಳಿದ್ದಾರೆ. ಸೌದಿ ಸರಕಾರದ ವಿರೋಧಿಗಳನ್ನು ಖಂಡಿಸಿರುವ ಅವರು, ಹತ್ಯೆ ಪ್ರಕರಣವನ್ನು ಅವರು ಬಳಸಿಕೊಳ್ಳುತ್ತಿದ್ದಾರೆ ಎಂದು ಟ್ವೀಟ್ನಲ್ಲಿ ಹೇಳಿದರು.
2018ರ ಅಕ್ಟೋಬರ್ 2ರಂದು ಟರ್ಕಿ ದೇಶದ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿ ಪ್ರವೇಶಿಸಿದ್ದ ಖಶೋಗಿಯನ್ನು ಮತ್ತೆ ಯಾರೂ ನೋಡಿಲ್ಲ. ಅಲ್ಲಿ ಅವರನ್ನು ಹತ್ಯೆ ಮಾಡಿ ದೇಹವನ್ನು ಛಿದ್ರಗೊಳಿಸಲಾಗಿತ್ತು.
ಸೌದಿ ಅರೇಬಿಯ ತನಗೆ ಹಣ ನೀಡಿತ್ತು ಎಂಬ ವರದಿಗಳನ್ನೂ ಸಲಾಹ್ ಖಶೋಗಿ ನಿರಾಕರಿಸಿದ್ದರು.
Next Story