ಮಂಗಳೂರು: ನಾಳೆ ಅಕ್ಷರ ಇ-ಮ್ಯಾಗಝೀನ್, ಪೆನ್ ಫ್ರೆಂಡ್ಸ್ ವತಿಯಿಂದ ಸಾಹಿತ್ಯ ಸಮ್ಮಿಲನ
ಮಂಗಳೂರು, ನ.2: ಅಕ್ಷರ ಇ-ಮ್ಯಾಗಝೀನ್ ಹಾಗೂ ಪೆನ್ ಫ್ರೆಂಡ್ಸ್ ಬರಹಗಾರರ ಬಳಗದ ವತಿಯಿಂದ ಸಾಹಿತ್ಯ ಸಮ್ಮಿಲನ ನಾಳೆ ಆದಿತ್ಯವಾರ (ನ.3) ಮಧ್ಯಾಹ್ನ 2:30ಕ್ಕೆ ಕಂಕನಾಡಿಯ ಟ್ಯಾಲೆಂಟ್ ಸಭಾಭವನದಲ್ಲಿ ನಡೆಯಲಿದೆ.
ಕೆ.ಎಂ.ಸಿದ್ದೀಖ್ ಮೋಂಟುಗೋಳಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸಲಿದ್ದಾರೆ.
ಪತ್ರಕರ್ತ ಹಂಝ ಮಲಾರ್, ಸಾಹಿತಿ ಅಬ್ದುರ್ರಝಾಕ್ ನಾವೂರು ಭಾಗವಹಿಸಲಿದ್ದಾರೆ ಎಂದು ಅಕ್ಷರ ಪ್ರಧಾನ ಸಂಪಾದಕ ಬಿ.ಎಸ್.ಇಸ್ಮಾಯಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story