ನ.24 ರಂದು ಸಜಿಪ ಉಸ್ತಾದ್ ಆಂಡ್ ನೇರ್ಚೆ, ಸಾಮೂಹಿಕ ವಿವಾಹ ಕಾರ್ಯಕ್ರಮ
ಬಂಟ್ವಾಳ, ನ.23: ಸಜಿಪ ಕೇಂದ್ರ ಜುಮಾ ಮಸೀದಿ ಇದರ ಆಶ್ರಯದಲ್ಲಿ ಶೈಖುನಾ ಮರ್ಹೂಂ ಸಜೀಪ ಉಸ್ತಾದ್ ರವರ 25ನೇ ಆಂಡ್ ನೇರ್ಚೆ ಹಾಗೂ ಎರಡು ಜೋಡಿಗಳ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮ ನ.24 ರಂದು ರವಿವಾರ ಬೆಳಗ್ಗೆ 10 ಗಂಟೆಗೆ ಜುಮಾ ಮಸೀದಿ ಆವರಣದಲ್ಲಿ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಸ್ಸಯ್ಯದ್ ಹುಸೈನ್ ಬಾಅಲವಿ ತಂಙಳ್ ದುವಾ ಆಶೀರ್ವಚನಗೆಯ್ಯಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story