ನಾರಾಯಣ ಉಚ್ಚಿಲ್ಕರ್ ನಿಧನ
ಮುಂಬೈ : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸೋಮೇಶ್ವರ ಉಚ್ಚಿಲ ಮೂಲತಃ ನಾರಾಯಣ ಉಚ್ಚಿಳ್ಕರ್ (81) ಅನಾರೋಗ್ಯದಿಂದ ಉಪನಗರ ಥಾಣೆ ಪಶ್ಚಿಮದ ಕರ್ವಾಲೋ ನಗರ್ ಇಲ್ಲಿನ ಅಪಾರ್ಟ್ಮೆಂಟ್ನ ಸ್ವಗೃಹದಲ್ಲಿ ನಿಧನರಾದರು.
ತಾಯಿನುಡಿ ಬಳಗ, ಬೋವಿ ಯಂಗ್ಮೆನ್ಸ್ ಅಸೋಸಿಯೇಶನ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದರು.
ಸಾಹಿತ್ಯ, ಯಕ್ಷಗಾನ ವಿಮರ್ಶಕ, ಸಾಹಿತ್ಯ ಪರಿಚಾರಕರಾಗಿ, ಯಕ್ಷಗಾನ ಅಭಿಮಾನಿಯಾಗಿ ಓರ್ವ ನಿಷ್ಠಾವಂತ ಸಮಾಜ ಸೇವಕರಾಗಿ ಜನಾನುರೆಣಿಸಿದ್ದರು. ಮಹಾನಗರ ಮುಂಬೈಯಲ್ಲಿನ ಹೆಸರಾಂತ, ಪ್ರತಿಷ್ಠಿತ ಶಿಕ್ಷಕಿ ಡಾ. ವಾಣಿ ಉಚ್ಚಿಲ್ಕರ್ ಅವರ ಪಿಎಚ್ಡಿ ಪದವಿಗೆ ಬೆನ್ನೆಲುಬುವಾಗಿ ಸಹಯೋಗವಿತ್ತ ಮೃತರು ಪತ್ನಿ ಡಾ. ವಾಣಿ ಉಚ್ಚಿಲ್ಕರ್, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ರವಿವಾರ ಮಧಾಹ್ನ ಥಾಣೆ ಪಶ್ಚಿಮದಲ್ಲಿನ ರುಧ್ರಭೂಮಿಯಲ್ಲಿ ನಡೆಯಲಿದೆ.
Next Story