ಗೋಲಿಬಾರ್ ಪರಿಹಾರ ತಡೆ ಹಿಡಿದಿರುವುದು ಸರಿಯಲ್ಲ: ಸುಶೀಲ್ ನೊರೊನ್ಹ
ಮಂಗಳೂರು, ಡಿ.25: ಮಂಗಳೂರು ಗೋಲಿಬಾರ್ ಘಟನೆಯ ಬಗ್ಗೆ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳು ಮಾನವೀಯತೆಗೆ ತಕ್ಕದಲ್ಲ. ಗೋಲಿಬಾರ್ಗೆ ಬಲಿಯಾದವರಿಗೆ ಘೋಷಿಸಿದ್ದ ಪರಿಹಾರದ ಮೊತ್ತವನ್ನು ತಡೆ ಹಿಡಿದಿರುವುದು ಸರಿಯಾದ ಕ್ರಮವಲ್ಲ. ಯಾವುದೇ ಧರ್ಮ, ಜಾತಿ, ಪಂಗಡವನ್ನು ಗಮನಿಸದೆ ಗಾಯಾಳು ಜನಸಾಮಾನ್ಯರಿಗೆ, ಪೊಲೀಸರಿಗೆ ಸರಕಾರ ಪರಿಹಾರ ನೀಡಬೇಕು ಎಂದು ಜೆಡಿಎಸ್ ದ.ಕ. ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ಒತ್ತಾಯಿಸಿದ್ದಾರೆ.
ಮಂಗಳೂರಿನ ಅಹಿತಕರ ಘಟನೆಗೆ ಸಂಬಂಧಿಸಿ ಗುಪ್ತಚರ ಇಲಾಖೆ ಯಾವುದೇ ಮುನ್ಸೂಚನೆ ಸರಕಾರಕ್ಕೆ ನೀಡದಿರುವುದು ದುರದೃಷ್ಟಕರ ಹಾಗೂ ಇದು ಸರಕಾರದ ವೈಫಲ್ಯಕ್ಕೆ ಸಾಕ್ಷಿ. ಈ ಬಗ್ಗೆ ಸರಕಾರ ಗುಪ್ತಚಾರ ಇಲಾಖೆ ಬಗ್ಗೆ ಕ್ರಮ ಕೈಗೊಳ್ಳತ್ತಿರುವುದು ವಿಪರಾಸ್ಯ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೆಕ್ಷನ್ 144 ಜಾರಿಯಲ್ಲಿದ್ದರೂ ಪ್ರತಿಭಟನೆಯನ್ನು ಆರಂಭದಲ್ಲೇ ಹತ್ತಿಕ್ಕುವ ಅವಕಾಶವಿದ್ದರೂ ಕ್ರಮ ಕೈಗೊಳ್ಳದಿರುವುದು ತಪ್ಪು. ಘಟನೆಯ ಬಳಿಕ ಮುಖ್ಯಮಂತ್ರಿ ಎರಡು ಬಾರಿ ನಗರಕ್ಕೆ ಭೇಟಿ ನೀಡಿದರೂ ಗೋಲಿಬಾರ್ಗೆ ಬಲಿಯಾದವರ ಮನೆಗಳಿಗೆ, ಗಾಯಾಳಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವ ಪ್ರತಿಭಟನಾಕಾರರನ್ನಾಗಲೀ, ಪೊಲೀಸರನ್ನಾಗಲಿ ಭೇಟಿಯಾಗದಿರುವುದು ಸರಿಯಾದ ಕ್ರಮವಲ್ಲ ಜೆಡಿಎಸ್ ರಾಜ್ಯ ರಾಜ್ಯ ಮಾಜಿ ಉಪಾಧ್ಯಕ್ಷರೂ ಆಗಿರುವ ಸುಶೀಲ್ ನೊರೊನ್ಹ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.