ಡಾ.ಪಿ.ನಾರಾಯಣ ರಾವ್ ಸಂಸ್ಮರಣೆ
ಉಡುಪಿ, ನ.11: ಉಡುಪಿ ಬಳಕೆದಾರರ ವೇದಿಕೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಇಂದು ದಿ.ಡಾ.ಪಿ. ನಾರಾಯಣ ರಾವ್ ಅವರ ಸಂಸ್ಮರಣಾ ಕಾರ್ಯಕ್ರಮ ಕಚೇರಿ ಸಭಾಂಗಣದಲ್ಲಿ ನಡೆಯಿತು.
ದಿ.ನಾರಾಯಣ ರಾಯರ ಅಭಿಮಾನಿಗಳಾದ ಕೆ. ಕೃಷ್ಣರಾವ್ ಕೊಡಂಚ, ವಿನೋದ್ ಕಾಮತ್, ರಾಮಚಂದ್ರ ಆಚಾರ್ಯ ಮತ್ತು ವೇದಿಕೆಯ ವಿಶ್ವಸ್ಥರಾದ ಶಾಂತರಾಜ ಐತಾಳ್, ಲಕ್ಷ್ಮೀಬಾಯಿ ಅವರು ನಾರಾಯಣರಾಯರ ಸಾಮಾಜಿಕ ಕಳಕಳಿ ಕುರಿತು ಮಾತನಾಡಿದರು.
ವೇದಿಕೆ ಸಂಚಾಲಕ ಎ.ಪಿ.ಕೊಡಂಚ ಸ್ವಾಗತಿಸಿದರೆ, ಶಾಂತರಾಜ ಐತಾಳ್ ವಂದಿಸಿದರು. ವಾದಿರಾಜಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.
Next Story