ದ.ಕ. ಜಿಲ್ಲೆ: ಗ್ರಾಪಂ ಚುನಾವಣೆಗೆ 4,896 ನಾಮಪತ್ರ ಸಲ್ಲಿಕೆ
ಮಂಗಳೂರು, ಡಿ.12: ದ.ಕ. ಜಿಲ್ಲೆಯಲ್ಲಿ ನಡೆಯಲಿರುವ ಮೊದಲ ಸುತ್ತಿನ ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕ ಮುಕ್ತಾಯವಾಗಿದ್ದು, ಇಲ್ಲಿಯವರೆಗೆ 4,896 ನಾಮಪತ್ರಗಳು ಸಲ್ಲಿಕೆಯಾಗಿವೆ.
ಮಂಗಳೂರು ತಾಲೂಕಿನಲ್ಲಿ 1,859, ಮೂಡುಬಿದಿರೆಯಲ್ಲಿ 485 ಮತ್ತು ಬಂಟ್ವಾಳ ತಾಲೂಕಿನಲ್ಲಿ 2,552 ನಾಮಪತ್ರಗಳು ಸಲ್ಲಿಕೆಯಾಗಿವೆ. ಈಗಾಗಲೇ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು 3,222 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 1,681 ಸ್ಥಾನಗಳಿಗೆ ಮತ್ತು ದ್ವಿತೀಯ ಹಂತದಲ್ಲಿ 1,541 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
Next Story