ಪ್ರಯಾಣ ನಿಷಿದ್ಧ ದೇಶಗಳ ಪಟ್ಟಿಗೆ ಪಾಕ್, ಬಾಂಗ್ಲಾ ಸೇರ್ಪಡೆ: ಬ್ರಿಟನ್

ಲಂಡನ್, ಎ. 2: ತನ್ನ ಪ್ರಯಾಣ ನಿಷಿದ್ಧ ದೇಶಗಳ ಪಟ್ಟಿಗೆ ಬಾಂಗ್ಲಾದೇಶ, ಕೆನ್ಯ, ಪಾಕಿಸ್ತಾನ ಮತ್ತು ಫಿಲಿಪ್ಪೀನ್ಸ್ ದೇಶಗಳನ್ನು ಸೇರಿಸುವುದಾಗಿ ಬ್ರಿಟನ್ ಶುಕ್ರವಾರ ತಿಳಿಸಿದೆ. ಬ್ರಿಟಿಶ್ ಅಥವಾ ಐರಿಶ್ ರಾಷ್ಟ್ರೀಯರ ಹೊರತು ಈ ದೇಶಗಳಿಂದ ಬರುವ ಇತರರಿಗೆ ಬ್ರಿಟನ್ ಪ್ರವೇಶಿಸಲು ಅವಕಾಶವಿಲ್ಲ ಎಂದು ಅದು ಹೇಳಿದೆ.
ನಿಷಿದ್ಧ ದೇಶಗಳ ಪಟ್ಟಿಯಲ್ಲಿರುವ ದೇಶಗಳಿಂದ ಬ್ರಿಟನ್ಗೆ ಬರುವವರಿಗೆ ಪ್ರವೇಶ ನಿಷೇಧಿಸಲಾಗಿದೆ ಹಾಗೂ ಆ ದೇಶಗಳಿಂದ ಬರುವವರು ಬ್ರಿಟನ್ ರಾಷ್ಟ್ರೀಯರಾದರೆ ಅವರು ಹೊಟೇಲ್ಗಳಲ್ಲಿ 10 ದಿನಗಳ ಕಡ್ಡಾಯ ಕ್ವಾರಂಟೈನ್ಗೆ ಒಳಪಡಬೇಕು ಎಂದಿದೆ.
ಎಪ್ರಿಲ್ 9ರಂದು ಬೆಳಗ್ಗೆ 4 ಗಂಟೆಗೆ ಪಾಕಿಸ್ತಾನ, ಕೆನ್ಯ, ಫಿಲಿಪ್ಪೀನ್ಸ್ ಮತ್ತು ಬಾಂಗ್ಲಾದೇಶವನ್ನು ಪ್ರಯಾಣ ನಿಷಿದ್ಧ ದೇಶಗಳ ಪಟ್ಟಿಗೆ ಸೇರಿಸಲಾಗುವುದು. ಈ ಪಟ್ಟಿಯಲ್ಲಿ ಈಗಾಗಲೇ ಸುಮಾರು 36 ದೇಶಗಳಿವೆ.
Next Story