ಸುಪ್ರೀಂ ಕೋರ್ಟ್ನ ಸ್ವಯಂಪ್ರೇರಿತ ಕೋವಿಡ್ ಕೇಸ್ನಲ್ಲಿ ಮಧ್ಯಪ್ರವೇಶ ಅರ್ಜಿ ಸಲ್ಲಿಸಿದ ಸಾಕೇತ್ ಗೋಖಲೆ

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಕೋವಿಡ್-19 ನಿರ್ವಹಣೆ ಕುರಿತಂತೆ ದಾಖಲಿಸಿರುವ ಸ್ವಯಂಪ್ರೇರಿತ ಪ್ರಕರಣದಲ್ಲಿ ಮಧ್ಯಪ್ರವೇಶ ಅರ್ಜಿಯನ್ನು ಇಂದು ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ ಅವರು ದಾಖಲಿಸಿದ್ದಾರೆ.
ವಿಶೇಷ (ಆದರೂ ಖಾಸಗಿ) ಕೋವಿಡ್ ನಿಧಿ ಎಂದು ಹೇಳಿಕೊಳ್ಳುತ್ತಿರುವ ಪಿಎಂ-ಕೇರ್ಸ್ ಫಂಡ್ ಅನ್ನು ಈ ಪ್ರಕರಣದಲ್ಲಿ ಪ್ರತಿವಾದಿಯಾಗಿಸಿ ಎಲ್ಲಾ ಮಾಹಿತಿ ನೀಡುವಂತೆ ಮಾಡಬೇಕೆಂದು ಸಾಕೇತ್ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.
ತಾನು ಕೋವಿಡ್ ಲಸಿಕೆ ಸಂಶೋಧನಕ್ಕೆ ಆರ್ಥಿಕ ಸಹಾಯ ಒದಗಿಸಿಲ್ಲದೇ ಇರುವುದರಿಂದ ಅದರ ಬೆಲೆಯ ಕುರಿತಂತೆ ಯಾವುದೇ ನಿರ್ದೇಶನ ನೀಡುವ ಹಾಗಿಲ್ಲ ಎಂದು ಭಾರತ ಸರಕಾರ ಈಗಾಗಲೇ ಸುಪ್ರೀಂ ಕೋರ್ಟ್ ಮುಂದೆ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.
ಪಿಎಂ ಕೇರ್ಸ್ ಫಂಡ್ ದೇಶದಲ್ಲಿ ಲಸಿಕೆ ಅಭಿವೃದ್ಧಿಗೆ 100 ಕೋಟಿ ರೂ. ನೀಡಿದೆ ಹಾಗೂ ಬಹಿರಂಗ ಪಡಿಸದೆಯೇ ಇನ್ನೂ ಹೆಚ್ಚು ಮೊತ್ತ ನೀಡಿರಬಹುದು ಎಂದು ಸಾಕೇತ್ ಗೋಖಲೆ ತಮ್ಮ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಹೇಳಿದ್ದಾರೆ.
I’ve filed an Intervention Application this morning in Supreme Court’s suo moto case on Covid-19.
— Saket Gokhale (@SaketGokhale) May 19, 2021
My application prays that PM CARES Fund be made a respondent in the case & furnish all details as it claims to be a dedicated (yet private) Covid-19 fund.
Fingers crossed