ತಲಾ ಆದಾಯ: ಭಾರತವನ್ನು ಹಿಂದಿಕ್ಕಿದ ಬಾಂಗ್ಲಾದೇಶ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ತಲಾ ಆದಾಯದ ವಿಚಾರದಲ್ಲಿ ನೆರೆಯ ಬಾಂಗ್ಲಾದೇಶವು ಭಾರತವನ್ನು ಹಿಂದಿಕ್ಕಿದೆ. ಆರ್ಥಿಕ ವರ್ಷ 2020-21ಗೆ ಬಾಂಗ್ಲಾದೇಶದ ತಲಾ ಆದಾಯ 2,227 ಡಾಲರ್ ಆಗಿದ್ದು ಇದು ಕಳೆದ ಆರ್ಥಿಕ ವರ್ಷದ ತಲಾ ಆದಾಯವಾದ $2,064ಗೆ ಹೋಲಿಸಿದಾಗ ಶೇ9ರಷ್ಟು ಏರಿಕೆಯಾಗಿದೆ.
ಬಾಂಗ್ಲಾದೇಶದ ಅಂಕಿಅಂಶಗಳನ್ನು ಅಲ್ಲಿನ ಯೋಜನಾ ಸಚಿವ ಎಂ ಎ ಮನ್ನಾನ್ ಅವರು ಪ್ರಧಾನಿ ಶೇಖ್ ಹಸೀನಾ ಅವರು ಭಾಗವಹಿಸಿದ್ದ ವರ್ಚುವಲ್ ಸಭೆಯಲ್ಲಿ ಪ್ರಸ್ತುತ ಪಡಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕದಿಂದ ಆರ್ಥಿಕ ನಿಧಾನಗತಿಯಿಂದಾಗಿ ಭಾರತದ ತಲಾ ಆದಾಯ 1947.417$ ಆಗಿದೆ. "ನಮ್ಮ ತಲಾ ಆದಾಯವು 2020-21ರ ಆರ್ಥಿಕ ವರ್ಷದಲ್ಲಿ 22 2,227 ಡಾಲರ್ ನಷ್ಟಿತ್ತು. ಆದರೆ ಹಿಂದಿನ ಆರ್ಥಿಕ ವರ್ಷದ ತಲಾ ಆದಾಯವು 2,064 ಡಾಲರ್ ಆಗಿತ್ತು. ಆದ್ದರಿಂದ, ಬೆಳವಣಿಗೆಯ ದರವು ಶೇಕಡಾ 9 ಆಗಿದೆ, ”ಎಂದು ಬಾಂಗ್ಲಾದೇಶದ ಕ್ಯಾಬಿನೆಟ್ ಕಾರ್ಯದರ್ಶಿ ಹೇಳಿದ್ದಾರೆ.
Next Story