ಜಮೀಯತುಲ್ ಉಲಮಾ ಹಿಂದ್ ಅಧ್ಯಕ್ಷ ಮೌಲಾನಾ ಖಾರೀ ಸೈಯದ್ ಮುಹಮ್ಮದ್ ಉಸ್ಮಾನ್ ಮನ್ಸೂರ್ ಪುರಿ ನಿಧನ

ಗುರುಗ್ರಾಮ: ಖ್ಯಾತ ಇಸ್ಲಾಮಿ ಪಂಡಿತ, ಜಮೀಯತುಲ್ ಉಲಮಾ ಹಿಂದ್ ಅಧ್ಯಕ್ಷ ಹಾಗೂ ದಾರುಲ್ ಉಲೂಮ್ ದಿಯೋಬಂದ್ ನ ಧಾರ್ಮಿಕ ನೇತೃತ್ವವನ್ನು ವಹಿಸಿದ್ದ ಮೌಲಾನಾ ಖಾರೀ ಸೈಯದ್ ಮುಹಮ್ಮದ್ ಉಸ್ಮಾನ್ ಮನ್ಸೂರ್ ಪುರಿ ರವರು ಇಂದು ನಿಧನರಾಗಿದ್ದಾರೆಂದು ತಿಳಿದು ಬಂದಿದೆ. ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಕೋವಿಡ್ ಸಂಬಂಧಿ ಕಾಯಿಲೆಯಿಂದ ನಿಧನರಾಗಿದ್ದಾರೆ ಎನ್ನಲಾಗಿದೆ.
ಅವರು ಮುಸ್ಲಿಂ ಸಮುದಾಯದ ಉನ್ನತ ವಿದ್ವಾಂಸರಾಗಿದ್ದು, ದಾರುಲ್ ಉಲೂಮ್ ದಯೂಬಂದ್ ನ ಮುಖ್ಯ ವಿದ್ವಾಂಸರಾಗಿದ್ದರು. ಭಯೋತ್ಪಾದನೆಯ ವಿರುದ್ಧ ಫತ್ವಾ ನೀಡಿದ್ದ ಇವರು ಭಯೋತ್ಪಾದನೆಯ ವಿರುದ್ಧ ಆಂದೋಲನವನ್ನೂ ಕೈಗೊಂಡಿದ್ದರು ಎಂದು ಜಮೀಯತ್ ಉಲಮಾ ಹಿಂದ್ ತನ್ನ ಟ್ವಿಟರ್ ನಲ್ಲಿ ತಿಳಿಸಿದೆ.
ಅವರು ಹಿಂದೂ-ಮುಸಿಂ ಒಗ್ಗಟ್ಟಿನ ನಡುವಿನ ಸೇತುವೆಯಾಗಿದ್ದು, ಜಮೀಯತುಲ್ ಉಲಮಾದ ಅಡಿಯಲ್ಲಿ ಸದ್ಭಾವನಾ ಮಂಚ್ ಅನ್ನು ಸ್ಥಾಪಿಸಿದ್ದರು.
(1944-2021)
— Jamiat Ulama-i-Hind (@JamiatUlama_in) May 21, 2021
Great Islamic Scholar, the President of Jamiat Ulama-i-Hind & Working Rector of Darul Uloom Deoband, Maulana Qari Syed Mohd Usman Mansoorpuri passed away today at Medanta Hospital, Gurgaon due to after COVID related complications.