ಸೌದಿಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಧನ ವಿತರಣೆ
ಕರ್ನಾಟಕ ಕಲ್ಚರಲ್ ಫೌಂಡೇಶನ್‌ನ ಸಹಕಾರ
ಮಂಗಳೂರು, ಫೆ.10:ಸೌದಿ ಅರೇಬಿಯಾದ ಅಲ್-ಖೋಬಾರ್‌ನ ದಹ್‌ರಾನ್‌ನಲ್ಲಿ 2019ರ ನ.24ರಂದು ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೃಷ್ಣಾಪುರದ ಮುಹಮ್ಮದ್ ನೌಶೀದ್‌ರ ಕುಟುಂಬಕ್ಕೆ ಪರಿಹಾರ ಧನ ವಿತರಿಸಲಾಗಿದೆ ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ತಿಳಿಸಿದೆ.
ಅಫಘಾತಕ್ಕೆ ಸಿಗಲಿರುವ ಪರಿಹಾರಧನಕ್ಕೆ ಬೇಕಾದ ದಾಖಲೆಗಳು ಮತ್ತಿತರ ಕಾರ್ಯಗಳನ್ನು ಮಾಡುವ ಜವಾಬ್ದಾರಿಯನ್ನು ನೌಶೀದ್ ಕುಟುಂಬಸ್ಥರು ಕರ್ನಾಟಕ ಕಲ್ಚರಲ್ ಫೌಂಡೇಶನ್‌ನ ಸಾಂತ್ವನ ವಿಭಾಗದ ಅಧ್ಯಕ್ಷ ಮುಹಮ್ಮದ್ ಮಲೆಬೆಟ್ಟು ಅವರಿಗೆ ವಹಿಸಿ ಕೊಟ್ಟಿದ್ದರು. ಅದರಂತೆ ಎರಡು ವರ್ಷಗಳ ಸತತ ಪ್ರಯತ್ನದಿಂದ ನೌಶೀದ್ ಕುಟುಂಬಕ್ಕೆ ಪರಿಹಾರವಾಗಿ 3 ಲಕ್ಷ ಸೌದಿ ಅರೇಬಿಯಾ ರಿಯಾಲ್ (58,56,200 ರೂ.) ಸಿಕ್ಕಿದೆ.
ಈ ಹಣವನ್ನು ಫೆ.4ರಂದು ಕೃಷ್ಣಾಪುರದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಅಧ್ಯಕ್ಷ ಮುಮ್ತಾಝ್ ಅಲಿ, ಇಮಾಮ್ ಫಾರೂಕ್ ಸಖಾಫಿ ಜಮಾಅತಿನವರ ಸಮ್ಮುಖದಲ್ಲಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
Next Story