ಮಣಿಪಾಲ: ಫ್ಲ್ಯಾಟ್ನಲ್ಲಿ ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು
ಮಣಿಪಾಲ : ಇಲ್ಲಿನ ವಿದ್ಯಾರತ್ನ ನಗರದ ವಸತಿ ಸಮುಚ್ಛಯದಲ್ಲಿನ ಫ್ಲ್ಯಾಟ್ ವೊಂದರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾ ಭರಣ ಹಾಗೂ ನಗದು ಕಳವಾಗಿರುವ ಬಗ್ಗೆ ವರದಿಯಾಗಿದೆ.
ಮಣಿಪಾಲದ ವೈದ್ಯ ಡಾ.ಪದ್ಮರಾಜ್ ಹೆಗ್ಡೆ ಎಂಬವರ ಪತ್ನಿ ಪ್ರಸನ್ನ ಪದ್ಮರಾಜ್ ಕಳೆದ ವಾರ ಕೋ ಆಪರೇಟಿವ್ ಬ್ಯಾಂಕಿನಿಂದ 4 ಲಕ್ಷ ರೂ. ಹಣವನ್ನು ಡ್ರಾ ಮಾಡಿದ್ದು, ಅದರಲ್ಲಿ 50 ಸಾವಿರ ಹಣವನ್ನು ಬೆಡ್ರೂಂನ ವಾರ್ಡ್ನಲ್ಲಿಟ್ಟು ಬೆಂಗಳೂರಿಗೆ ಹೋಗಿದ್ದರು. ಫೆ.16ರಂದು ರಾತ್ರಿ ವಾಪಾಸ್ ಬಂದು ನೋಡಿದಾಗ 50 ಸಾವಿರ ರೂ. ನಗದು, ಲಾಕರ್ನಲ್ಲಿಟ್ಟಿದ್ದ ಒಟ್ಟು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಕಳವಾಗಿರುವುದು ಕಂಡುಬಂದಿವೆ.
ಈ ಚಿನ್ನಾಭರಣ ಹಾಗೂ ಹಣವನ್ನು ಮನೆ ಕೆಲಸದ ರಾಧಾ ಕಳವು ಮಾಡಿ ಕೊಂಡು ಹೋಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪ್ರಸನ್ನ ದೂರು ನೀಡಿದ್ದು ಅದರಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story