ಮಾ.6: ಪ್ಯಾಂಟೆ ಪ್ಯಾಂಟೆಲ್ ಬ್ಯಾರಿ ಸಂದಲ್ ಕಾರ್ಯಕ್ರಮ
ಮಂಗಳೂರು, ಮಾ.3: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಮಾ..6ರಂದು ಸುರತ್ಕಲ್-ಕೃಷ್ಣಾಪುರ-ಕಾಟಿಪಳ್ಳದ ಒಂಭತ್ತು ಸ್ಥಳಗಳಲ್ಲಿ ಬ್ಯಾರಿ ಜಾಪದ, ಕಲೆ, ಸಂಸ್ಕೃತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಬ್ಯಾರಿ ಸಾಂಸ್ಕೃತಿಕ ರಥದ ಮೂಲಕ ಪ್ಯಾಂಟೆ ಪ್ಯಾಂಟೆಲ್ ಬ್ಯಾರಿ ಸಂದಲ್ 2021-22 ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಬ್ಯಾರಿ ಸಾಂಸ್ಕೃತಿಕ ರಥದ ಮೂಲಕ ಬ್ಯಾರಿ ಸಂಗೀತ ಕಾರ್ಯಕ್ರಮ, ಬ್ಯಾರಿ ಜಾನಪದ ನೃತ್ಯಗಳಾದ ಕೋಲ್ಕಲಿ, ಒಪ್ಪನೆ ಪಾಟ್, ಬ್ಯಾರಿ ದಫ್ ಪ್ರದರ್ಶನಗಳು ನಡೆಯಲಿದೆ ಎಂದು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.
Next Story