ಮಂಗಳೂರು: ಅಲ್ ಅಝ್ಹರಿಯ ಮದ್ರಸದ ಸನದುದಾನ ಕಾರ್ಯಕ್ರಮ

ಮಂಗಳೂರು, ಮಾ.18: ಅಲ್ ಅಝ್ಹರಿಯ ಮದ್ರಸದ 85ನೇ ವಾರ್ಷಿಕ ಹಾಗೂ ಅಲೀಂ ಕೋರ್ಸ್ ಪೂರ್ಣಗೊಳಿಸಿದ ಒಂಭತ್ತು ವಿಧ್ಯಾರ್ಥಿಗಳಿಗೆ ಸನದುದಾನ ಸಮಾರಂಭವು ಇತ್ತೀಚೆಗೆ ಮದ್ರಸದ ಸಭಾಂಗಣದಲ್ಲಿ ನಡೆಯಿತು.
ಇದರ ಉದ್ಘಾಟನೆ ಹಾಗೂ ಸನದುದಾನವನ್ನು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿರ್ವಹಿಸಿದರು.
ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷ ಹಾಜಿ ಎಸ್.ಎಂ.ರಶೀದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ, ಬದ್ರಿಯಾ ಜುಮಾ ಮಸೀದಿಯ ಖತೀಬ್ ಹಾಜಿ ಶೇಖ್ ಅಬ್ದುಲ್ಲಾ ಬಾಖವಿ, ಸ್ಥಳೀಯ ಕಾರ್ಪೊರೇಟ್ ಅಬ್ದುಲ್ ಲತೀಫ್ ಕಂದಕ್ ಭಾಗವಹಿಸಿದ್ದರು.
ಮದ್ರಸದ ಮುದರ್ರಿಸರಾದ ಹೈದರ್ ಮದನಿ, ಸಹಾಯಕ ಮುದರ್ರಿಸ್ ಅಬೂಬಕರ್ ಮದನಿ, ಸದರ್ ಗಳಾದ ಬಶೀರ್ ಮದನಿ ಹಾಗೂ ಯಹ್ಯಾ ಮದನಿ ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಸಿ.ಕೆ.ಅಹ್ಮದ್, ಹಾಜಿ ಗಫೂರ್, ಕೆ.ಪಿ.ರಶೀದ್, ಅಶ್ರಫ್ ಕಾಯರ್ ಖಾನ್, ಹಾಜಿ ರಿಯಾಝುದ್ದೀನ್ ಕಚ್ಚಿಮನ್, ಹಾಜಿ ಅಬ್ದುಲ್ ಖಾದರ್ ಕಂದಕ್, ಮೊಹಿನ್ ಹಸನ್, ಹಾಜಿ ರಿಯಾಝುದ್ದೀನ್ ಬಂದರ್, ಹಾಜಿ ಇಬ್ರಾಹೀಂ ಕಂದಕ್, ಹಾಜಿ ಅರ್ಶದ್ ಮೊದಲಾದವರು ಉಪಸ್ಥಿತರಿದ್ದರು.