ಹಿದಾಯ ಫೌಂಡೇಶನ್ ವತಿಯಿಂದ ಹಿತೈಷಿಗಳ ಸಮ್ಮಿಲನ ಕಾರ್ಯಕ್ರಮ

ಮಂಗಳೂರು : ನಾವು ಸಂಪಾದಿಸಿದ ಒಂದಂಶ ಬಡವರಿಗಾಗಿ ಮಿಸಲಿಟ್ಟಲ್ಲಿ ನಮ್ಮ ಸಂಪಾದನೆಯ ವೃದ್ಧಿಗೆ ಅದು ಎಕೈಕ ಮಾರ್ಗವಾಗಿದೆ ಎಂದು ಹಿದಾಯ ಫೌಂಡೇಶನ್ (ರಿ) ಮಂಗಳೂರು ಇದರ ಕೇಂದ್ರ ಸಮಿತಿಯ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಅಭಿಪ್ರಾಯಪಟ್ಟರು.
ಅವರು ಇಂದು ಹಿದಾಯ ಹಿತೈಷಿಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ, ಮಂಗಳೂರು ಹಿದಾಯ ಫೌಂಡೇಶನ್ ಕಚೇರಿಯಲ್ಲಿ ಮಾತಾಡುತ್ತಿದ್ದರು.
ಹಿದಾಯ ಸಂಸ್ಥೆಯ ಕಾರ್ಯ ವೈಖರಿಯನ್ನು ಹದಿನೈದು ನಿಮಿಷಗಳ ವಿಡಿಯೋ ಚಿತ್ರೀಕರಣದ ಮುಖಾಂತರ ಸದಸ್ಯರಾದ ಹಕೀಂ ಕಲಾಯಿ ಸಂಸ್ಥೆಯ ಮುನ್ನಡೆಯನ್ನು ಪರಿಚಯಿಸಿದರು.
ಉಪಾಧ್ಯಕ್ಷರಾದ ಆಸಿಫ್ ಇಕ್ಬಾಲ್ ಫರಂಗಿಪೇಟೆ ಉಪಸ್ಥಿತರಿದ್ದರು. ಇನ್ನೋರ್ವ ಉಪಾಧ್ಯಕ್ಷರಾದ ಮಕ್ಬೂಲ್ ಅಹ್ಮದ್ ಕಿರಾಅತ್ ಪಠಿಸಿದರು, ಜತೆ ಕಾರ್ಯದರ್ಶಿ ಅಬ್ದುಲ್ ರಝಾಕ್ ಸಂಸ್ಥೆಯ ಸಾಧನೆಗಳ ಬಗ್ಗೆ ಪ್ರಸ್ತಾಪಿಸಿ, ಆಹಾರ, ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಮತ್ತು ಸ್ವಾವಲಂಬಿ ಯೋಜನೆಗಳು, ಅಲ್ಲದೆ ವಿಶೇಷ ಮಕ್ಕಳ ಶಾಲೆ, ಕುಟುಂಬ ದತ್ತು ಯೋಜನೆ, ಹಿದಾಯ ಅಕಾಡೆಮಿ, ವೆಲ್ ನೆಸ್ ಹೆಲ್ಪ್ ಲೈನ್ ಸೇವೆಗಳ ಬಗ್ಗೆ ತಿಳಿಯಪಡಿಸಿ ಸರ್ವರನ್ನೂ ಸ್ವಾಗತಿಸಿದರು.
ಸಂಸ್ಥೆಯ ಆಡಳಿತಾಧಿಕಾರಿ ಆಬಿದ್ ಅಸ್ಗರ್ ವಂದಿಸಿದರು. ಬಿ.ಎಂ.ತುಂಬೆ ಕಾರ್ಯಕ್ರಮ ನಿರೂಪಿಸಿದರು.