ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಸಮಿತಿಯಿಂದ ಮಾಹಿತಿ ಕಾರ್ಯಗಾರ

ಉಪ್ಪಿನಂಗಡಿ : ಎಸ್ಸೆಸ್ಸೆಫ್ ದ.ಕ.ಜಿಲ್ಲಾ ಈಸ್ಟ್ ಸಮಿತಿಯ ವತಿಯಿಂದ ಸುಹ್ಬಾ ಮಾಹಿತಿ ಕಾರ್ಯಗಾರವು ಜಿಲ್ಲಾಧ್ಯಕ್ಷ ಇಬ್ರಾಹಿಂ ಅಮ್ಜದಿ ಅಧ್ಯಕ್ಷತೆಯಲ್ಲಿ ರವಿವಾರ ಉಪ್ಪಿನಂಗಡಿ ಸುನ್ನಿ ಸೆಂಟರ್ನಲ್ಲಿ ನಡೆಯಿತು.
ರಾಜ್ಯ ಸಮಿತಿಯ ಕ್ಯೂಡಿ ಕಾರ್ಯದರ್ಶಿ ಮುಸ್ತಫಾ ನಈಮಿ ಮೋಂಟುಗೋಳಿ ಕಾರ್ಯಾಗಾರ ನಡೆಸಿಕೊಟ್ಟರು. ರಾಜ್ಯ ಸಮಿತಿ ಸದಸ್ಯರಾದ ಫೈಝಲ್ ಝಹ್ರಿ, ರಶೀದ್ ಮಡಂತ್ಯಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಫೀಕ್ ಮಾಸ್ಟರ್, ಜಿಲ್ಲಾ ಕೋಶಾಧಿಕಾರಿ ಸಿದ್ದೀಕ್ ಸುಳ್ಯ, ಕಾರ್ಯದರ್ಶಿಗಳಾದ ಹಕೀಂ ಕಲಂಜಿಬೈಲ್, ಮಸೂದ್ ಸಅದಿ, ಎಫ್.ಎಚ್ ಮಿಸ್ಬಾಹಿ, ಝಬೈರ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕ್ಯೂಡಿ ಕಾರ್ಯದರ್ಶಿ ಇಕ್ಬಾಲ್ ಮಾಚಾರ್ ಸ್ವಾಗತಿಸಿ, ವಂದಿಸಿದರು.
Next Story