ಸತತ ಎರಡನೇ ಬಾರಿ ವಿಶ್ವಕಪ್ ಗೆ ಅರ್ಹತೆ ಪಡೆಯಲು ವಿಫಲವಾದ ಇಟಲಿ

Photo credit: Twitter/@Azzurri_En
ರೋಮ್: ಎಂಟು ತಿಂಗಳ ಹಿಂದೆಯಷ್ಟೇ ಯುರೋಪಿಯನ್ ಚಾಂಪಿಯನ್ಶಿಪ್ ಗೆದ್ದುಕೊಂಡಿದ್ದ ಇಟಲಿ ಫಟ್ಬಾಲ್ ತಂಡವು ಮುಂಬರುವ ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
ಗುರುವಾರ ನಡೆದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ನಾರ್ತ್ ಮ್ಯಾಸಿಡೋನಿಯಾ ತಂಡದ ವಿರುದ್ಧ ಇಟಲಿ 1-0 ಅಂತರದಿಂದ ಸೋಲನುಭವಿಸಿತು.
ಇಟಲಿಯು ಇದೇ ಮೊದಲ ಬಾರಿ ಸತತ ಎರಡನೇ ವಿಶ್ವಕಪ್ನಿಂದ ಹೊರಗುಳಿಯಲಿದೆ. 2018 ರಲ್ಲಿ ಪಂದ್ಯಾವಳಿಗೆ ಪ್ರವೇಶಿಸಲು ವಿಫಲವಾಗಿತ್ತು.
ಕಳೆದ ವರ್ಷದ ಜುಲೈನಲ್ಲಿ ರಾಬರ್ಟೊ ಮ್ಯಾನ್ಸಿನಿ ತರಬೇತಿಯಲ್ಲಿ ಪಳಗಿದ್ದ ಇಟಲಿ ತಂಡವು ವೆಂಬ್ಲಿ ಸ್ಟೇಡಿಯಂನಲ್ಲಿ ಯುರೋ-2020 ಕಪ್ ಅನ್ನು ಗೆದ್ದುಕೊಂಡು ಸಂಭ್ರಮಿಸಿತ್ತು.
Next Story