ಉದ್ಯಾವರ: ಎಂ.ಇ.ಟಿ. ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ 'ಚಿಣ್ಣರ ಘಟಿಕೋತ್ಸವ'

ಉಡುಪಿ, ಎ.1: ಉದ್ಯಾವರದ ಎಂ.ಇ.ಟಿ. ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಚಿಣ್ಣರ ಘಟಿಕೋತ್ಸವ ಸಮಾರಂಭವು ಗುರುವಾರ ನಡೆಯಿತು.
ಮುಖ್ಯ ಅತಿಥಿಗಳಾಗಿ ಅಮೃತ್ ಶೆಣೈ ಹಾಗೂ ಪ್ರತಿಭಾ ಲಿಡಿಯಾ ಭಾಗವಹಿಸಿದ್ದರು.
ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಇಕ್ಬಾಲ್, ಆಡಳಿತ ಮುಖ್ಯಸ್ಥೆ ಡಾ.ಜುನೈದ ಸುಲ್ತಾನ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ಉಮೇಶ್ ಉಪಸ್ಥಿತರಿದ್ದರು.
ಈ ವೇಳೆ ಚಿಣ್ಣರನ್ನು ಸನ್ಮಾನಿಸಲಾಯಿತು. ಉತ್ತಮ ಅಂಕ ಗಳಿಸಿದವರಿಗೆ ಮತ್ತು ಶಾಲೆಯಲ್ಲಿ ನಡೆದ ಸ್ವರ್ಧೆಗಳಲ್ಲಿ ವಿಜೇತರಾದವರನ್ನೂ ಸನ್ಮಾನಿಸಲಾಯಿತು.
ಸುಪ್ರೀತಾ ಕುಲಾಲ್ ಸ್ವಾಗತಿಸಿದರು. ಸಂಜತಾ ವಂದಿಸಿದರು. ಸಬೀನಾ ಹಾಗೂ ಶಿಲ್ಪಾಶ್ರಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.
Next Story